ಕಾರ್ಕಳ: ಉದ್ದಿಮೆದಾರರಿಗೆ ಸೂಚನೆ

Update: 2019-05-22 15:44 GMT

ಕಾರ್ಕಳ, ಮೇ 22: ಬೆಂಗಳೂರಿನ ಪೌರಸುಧಾರಣಾ ಕೋಶ ಇವರು ಆನ್‌ಲೈನ್ ತಂತ್ರಾಂಶ ‘ಇ-ವ್ಯಾಪಾರ’ದಲ್ಲಿ ಹಲವು ಮಾರ್ಪಾಡುತ ಗಳನ್ನು ಮಾಡಿದ್ದು, ಈ ಹಿನ್ನೆಲೆಯಲ್ಲಿ ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಉದ್ದಿಮೆದಾರರಿಗೆ ಕಾರ್ಕಳ ಪುರಸಭೆ ಕೆಲವು ಸೂಚನೆಗಳನ್ನು ನೀಡಿದೆ.

2019-20ನೇ ಸಾಲಿನ ವ್ಯಾಪಾರ ಪರವಾನಿಗೆ ನವೀಕರಣಕ್ಕೆ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿದವರು ತಮ್ಮ ದೂರವಾಣಿ ಸಂಖ್ಯೆಗೆ ಮೆಸೇಜ್ ಬಂದ ತಕ್ಷಣ ಪುರಸಭಾ ಕಚೇರಿಗೆ ಬಂದು ಅಗತ್ಯ ಚಲನ್ ಪೆದು, ಅದೇ ದಿನ ಕಾರ್ಕಲ ವಿಜಯಾ ಬ್ಯಾಂಕಿನಲ್ಲಿ ಹಣ ಕಟ್ಟಿ ಅದರ ಯಥಾಪ್ರತಿ ಯನ್ನು ಕಚೇರಿಗೆ ಮರು ಸಲ್ಲಿಸಿದ ನಂತರ ಮುಖ್ಯಾಧಿಕಾರಿಯವರಿಂದ ಡಿಜಿಟಲ್ ಕೀ ಮೂಲಕ ಅನುಮೋದನೆ ನೀಡಿದ ನಂತರ ಪರವಾನಿಗೆ ಪಡೆಯ ಬಹುದಾಗಿದೆ.

ಆನ್‌ಲೈನ್ ತಂತ್ರಾಂಶದಲ್ಲಿ ತಾಂತ್ರಿಕ ದೋಷ ಆಗಾಗ್ಗೆ ಸಂಭವಿಸುವುದರಿಂದ ನವೀಕರಣ ಶುಲ್ಕದ ಚಲನ್ ಮತ್ತು ಉದ್ದಿಮೆ ಪರವಾನಿಗೆ ಪಡೆಯಲು ವಿಳಂಬವಾಗುತ್ತಿದೆ. ಈ ಅಂಶಗಳನ್ನು ಅರಿತು ಪುರಸಭೆಯೊಂದಿಗೆ ಸಹಕರಿಸುವಂತೆ ಕಾರ್ಕಳ ಪುರಸಭೆಯ ಮುಖ್ಯಾಧಿಕಾರಿಯವರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News