ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

Update: 2019-05-22 15:45 GMT

ಉಡುಪಿ, ಮೇ 22: ಉಡುಪಿ ದೇವಾಡಿಗ ಯುವ ವೇದಿಕೆಯ ವತಿಯಿಂದ ಉಡುಪಿ ತಾಲೂಕು ವ್ಯಾಪ್ತಿಯ ದೇವಾಡಿಗ ಸಮುದಾಯದ ಈ ಬಾರಿಯ ಎಸೆಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಶೇ.85ಕ್ಕಿಂತ ಹೆಚ್ಚು ಅಂಕಗಳೊಂದಿಗೆ ತೇರ್ಗಡೆಗೊಂಡ ವಿದ್ಯಾರ್ಥಿಗಳಿಂದ ವಿದ್ಯಾರ್ಥಿ ವೇತಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಈ ಅರ್ಜಿಯನ್ನು ಸ್ವತಃ ಬರೆದು ತಮ್ಮ ಮೊಬೈಲ್ ಸಂಖ್ಯೆ, ಅಂಕ ಪಟ್ಟಿಯ ದೃಢೀಕೃತ ಪ್ರತಿಯನ್ನು ಅರ್ಜಿಯೊಂದಿಗೆ ಲಗತ್ತಿಸಿ ಮೇ 28ರೊಳಗೆ ಈ ಕೆಳಗಿನ ವಿಳಾಸಕ್ಕೆ ಕಳುಹಿಸಲು ಕೋರಲಾಗಿದೆ. ವಿಳಾಸ: ದೇವಾಡಿಗ ಯುವ ವೇದಿಕೆ ಉಡುಪಿ, ಕೇರಾಫ್ ದಿಶಾ ಸ್ಟುಡಿಯೋ, ಕುಂಜಿಬೆಟ್ಟು, ಉಡುಪಿ - 576102. ಹೆಚ್ಚಿನ ಮಾಹಿತಿಗೆ ಮೊಬೈಲ್ ನಂ.-9448177899/9880430966ನ್ನು ಸಂಪರ್ಕಿಸುವಂತೆ ದೇವಾಡಿಗ ಯುವ ವೇದಿಕೆ ಪ್ರಕಟಣೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News