ಎನ್‌ಸಿಪಿ ನಾಯಕ ಜಯದತ್ ಕ್ಷೀರಸಾಗರ್ ಶಿವಸೇನೆಗೆ ?

Update: 2019-05-22 16:17 GMT

ಮುಂಬೈ, ಮೇ 22: ಮಹಾರಾಷ್ಟ್ರದಲ್ಲಿ ಲೋಕಸಭಾ ಚುನಾವಣೆಯಲ್ಲಿ ಶಿವಸೇನೆ-ಬಿಜೆಪಿ ಮೈತ್ರಿ ಭರ್ಜರಿ ಜಯಗಳಿಸಲಿದೆ ಎಂದು ಚುನಾವಣೋತ್ತರ ಸಮೀಕ್ಷೆ ತಿಳಿಸಿದ ಬಳಿಕ ಎನ್‌ಸಿಪಿ ನಾಯಕ ಹಾಗೂ ಮಾಜಿ ಸಂಪುಟ ಸಚಿವ ಜಯ್‌ದತ್ತ್ ಕ್ಷೀರಸಾಗರ್ ಅವರು ಬುಧವಾರ ಉದ್ದವ್ ಠಾಕ್ರೆ ಅವರ ಪಕ್ಷ ಸೇರಲಿದ್ದಾರೆ.

 ಧನಂಜಯ ಮುಂಡೆ ಅವರಿಗೆ ಪ್ರಾಮುಖ್ಯತೆ ನೀಡುತ್ತಿರುವ ಹಿನ್ನೆಲೆಯಲ್ಲಿ ಎನ್‌ಸಿಪಿ ನಾಯಕತ್ವದ ಬಗ್ಗೆ ಅಸಮಾಧಾನ ಹೊಂದಿದ ಬಳಿಕ ಕ್ಷೀರಸಾಗರ್ ಶೀಘ್ರದಲ್ಲಿ ಶಿವಸೇನೆ ಸೇರಲಿದ್ದಾರೆ ಎಂಬ ವದಂತಿ ರಾಜಕೀಯ ವಲಯದಲ್ಲಿ ಹರಡಿದೆ. ಎನ್‌ಸಿಪಿಯೊಂದಿಗೆ ಅಸಮಾಧಾನದ ಬಳಿಕ ಅವರು ಬಿಜೆಪಿ-ಶಿವಸೇನೆ ಅಭ್ಯರ್ಥಿ ಡಾ. ಪ್ರೀತಮ್ ಮುಂಡೆ ಅವರನ್ನು ಬೆಂಬಲಿಸಿದ್ದಾರೆ ಹಾಗೂ ಅವರಿಗೆ ಮತ ಹಾಕುವಂತೆ ಜನರನ್ನು ಆಗ್ರಹಿಸಿದ್ದಾರೆ. ಎಪ್ರಿಲ್‌ನಲ್ಲಿ ಕ್ಷೀರಸಾಗರ್ ಅವರು ಶಿವಸೇನೆ ಉದ್ಧವ್ ಠಾಕ್ರೆ ಅವರ ನಿವಾಸ ಮಾತೋಶ್ರಿಯಲ್ಲಿ ಉದ್ಧವ್ ಠಾಕ್ರೆ ಅವರೊಂದಿಗೆ ಮಾತುಕತೆ ನಡೆಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News