ಪಣಜಿ: ರಶ್ಯನ್ ಮಹಿಳೆಯ ಹಿಂಬಾಲಿಸಿ ಕಿರುಕುಳ

Update: 2019-05-22 16:24 GMT

ಪಣಜಿ, ಮೇ 22: ಗೋವಾದ ಅರ್ಪೋರಾ ಗ್ರಾಮದಲ್ಲಿ ಅಪರಿಚಿತ ದ್ವಿಚಕ್ರ ವಾಹನ ಸವಾರರು ನನ್ನನ್ನು ಹಿಂಬಾಲಿಸಿದ್ದಾರೆ ಹಾಗೂ ಕೆನ್ನೆಗೆ ಥಳಿಸಿದ್ದಾರೆ ಎಂದು ರಶ್ಯಾದ ಪ್ರವಾಸಿ ಮಹಿಳೆಯೋರ್ವರು ಆರೋಪಿಸಿದ್ದಾರೆ.

 ತಾನು ದೂರು ದಾಖಲಿಸಿದ ಹೊರತಾಗಿಯೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಹೇಳಿದ್ದಾರೆ. ಮೇ 15ರಂದು ಮಧ್ಯಾಹ್ನ ಇಬ್ಬರು ವ್ಯಕ್ತಿಗಳು ದ್ವಿಚಕ್ರ ವಾಹನದಲ್ಲಿ ನನ್ನನ್ನು ಹಿಂಬಾಲಿಸಿಕೊಂಡು ಬಂದರು. ಅರ್ಪೋರಾದಲ್ಲಿ ಎಟಿಎಂಗೆ ಹೋಗಿ ಮನೆಗೆ ಹಿಂದಿರುಗುವ ಸಂದರ್ಭ ಮನೆಗೆ ಡ್ರಾಪ್ ನೀಡುವುದಾಗಿ ಹೇಳಿದರು. ಆದರೆ, ನಾನು ನಿರಾಕರಿಸಿದೆ. ಅನಂತರ ಕೂಡ ಅವರು ನನ್ನನ್ನು ಹಿಂಬಾಲಿಸಿಕೊಂಡು ಬಂದು ಕೆನ್ನೆಗೆ ಥಳಿಸಿದರು ಎಂದು ಅವರು ಹೇಳಿದ್ದಾರೆ.

 ನಾನು ದೂರು ನೀಡಿದರೂ ಪೊಲೀಸರು ಏನನ್ನೂ ಮಾಡಿಲ್ಲ ಎಂದು ಮಹಿಳೆ ಆರೋಪಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಅಂಜುನಾ ಪೊಲೀಸರು, ಮಹಿಳೆಯ ಪ್ರತಿಪಾದನೆಯನ್ನು ನಾವು ಪರಿಶೀಲಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News