ಪ್ರಧಾನಿಯನ್ನು ಅಬೆ ಶಿಂಝೊ ಎಂದು ಕರೆಯಿರಿ

Update: 2019-05-22 16:36 GMT

ಟೋಕಿಯೊ (ಜಪಾನ್), ಮೇ 22: ತನ್ನ ಪ್ರಧಾನಿಯನ್ನು ಅಬೆ ಶಿಂಝೊ ಎಂಬುದಾಗಿ ಕರೆಯಿರಿ, ಶಿಂಝೊ ಅಬೆ ಎಂದಲ್ಲ ಎಂಬುದಾಗಿ ಜಪಾನ್ ಇಂಗ್ಲಿಷ್ ಮಾತನಾಡುವ ಜಗತ್ತಿಗೆ ಮನವಿ ಮಾಡಿದೆ.

 ಜಪಾನ್‌ನಲ್ಲಿ ಜನರ ಹೆಸರು ಬರೆಯುವಾಗ ಅವರ ಕುಟುಂಬದ ಹೆಸರನ್ನು ಮೊದಲು ಹಾಗೂ ವೈಯಕ್ತಿಕ ಹೆಸರನ್ನು ನಂತರ ಬರೆಯಲಾಗುತ್ತದೆ. ಚೀನಾ ಮತ್ತು ಕೊರಿಯಗಳಲ್ಲೂ ಇಂಥದೇ ಮಾದರಿಯನ್ನು ಅನುಸರಿಸಲಾಗುತ್ತದೆ.

ಆದರೆ, ಅವರ ಹೆಸರನ್ನು ಇಂಗ್ಲಿಷ್‌ನಲ್ಲಿ ಬರೆಯುವಾಗ ಬಹುತೇಕ ಒಂದೂವರೆ ಶತಮಾನದ ಅವಧಿಯಲ್ಲಿ ಇದಕ್ಕೆ ವಿರುದ್ಧವಾಗಿ ಬರೆಯಲಾಗುತ್ತಿದೆ.

‘‘ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ದಕ್ಷಿಣ ಕೊರಿಯ ಅಧ್ಯಕ್ಷ ಮೂನ್ ಜೇ-ಇನ್ ಮಾದರಿಯಲ್ಲಿ, ಜಪಾನ್ ಪ್ರಧಾನಿಯ ಹೆಸರನ್ನು ಇನ್ನು ಮುಂದೆ ಅಬೆ ಶಿಂಝೊ ಎಂಬುದಾಗಿ ಬರೆಯಲಾಗುತ್ತದೆ ಎಂದು ಸರಕಾರ ನಿರೀಕ್ಷಿಸುತ್ತದೆ’’ ಎಂದು ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಜಪಾನ್ ವಿದೇಶ ಸಚಿವ ಟರೊ ಕೊನೊ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News