ನಳಿನ್ ಕುಮಾರ್‌ಗೆ ಭರ್ಜರಿ ಮತಗಳೊಂದಿಗೆ ಹ್ಯಾಟ್ರಿಕ್ ಗೆಲುವು

Update: 2019-05-23 12:51 GMT

ಮಂಗಳೂರು, ಮೇ 23: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಸಂಸದ ಹಾಗೂ ಬಿಜೆಪಿಯ ಅಭ್ಯರ್ಥಿ ನಳಿನ್ ಕುಮಾರ್‌ ಕಟೀಲ್‌ರವರು 774285 ಮತಗಳನ್ನು ಪಡೆದು ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಮಿಥುನ್ ರೈ ವಿರುದ್ಧ 274621 ಭರ್ಜರಿ ಮತಗಳ ಅಂತರದಿಂದ ಹ್ಯಾಟ್ರಿಕ್ ಜಯವನ್ನು ತಮ್ಮಾಗಿಸಿಕೊಂಡಿದ್ದಾರೆ.

ಈ ಮೂಲಕ ಕಾಂಗ್ರೆಸ್‌ನ ಯುವ ಅಭ್ಯರ್ಥಿ ಮಿಥುನ್ ರೈ ಪ್ರಥಮ ಪ್ರಯತ್ನದಲ್ಲೇ ಹೀನಾಯ ಸೋಲನ್ನನುಭವಿಸಿದ್ದಾರೆ. ಭಾರೀ ನಿರೀಕ್ಷೆ ಯೊಂದಿಗೆ ಟಿಕೆಟ್ ಗಿಟ್ಟಿಸಿಕೊಂಡು ಅಬ್ಬರದ ಪ್ರಚಾರವನ್ನೂ ನಡೆಸಿದ್ದ ಮಿಥುನ್ ರೈ 499664 ಮತಗಳನ್ನು ಪಡೆದಿದ್ದಾರೆ.

ಎಪ್ರಿಲ್ 18ರಂದು ನಡೆದ ಮತದಾನದಲ್ಲಿ ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ 1343213 ಮತಗಳು ಚಲಾವಣೆಯಾಗಿತ್ತು. ಅಂಚೆ ಮತಗಳು ಸೇರಿದಂತೆ ಚಲಾವಣೆಯಾದ ಒಟ್ಟು ಮತಗಳು 1345039.

ಅಂಚೆ ಮತಗಳಲ್ಲೂ ನಳಿನ್ ಕುಮಾರ್ ಮೇಲುಗೈ

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 2134 ಅಂಚೆ ಮತಗಳು ಚಲಾವಣೆಯಾಗಿದ್ದು, 1531 ಮತಗಳನ್ನು ನಳಿನ್ ಕುಮಾರ್ ಕಟೀಲ್ ಪಡೆದಿದ್ದು, ಮಿಥುನ್ ರೈ 277 ಮತಗಳನ್ನು ಪಡೆದಿದ್ದಾರೆ. 308 ಮತಗಳು ತಿರಸ್ಕೃತಗೊಂಡಿವೆ.

ಕಣದಲ್ಲಿದ್ದ ಅಭ್ಯರ್ಥಿಗಳು ಪಡೆದ ಮತಗಳು

ನಳಿನ್ ಕುಮಾರ್ ರೈ (ಬಿಜೆಪಿ) -774285
ಮಿಥುನ್ ರೈ (ಕಾಂಗ್ರೆಸ್)- 499664
ಎಸ್. ಸತೀಶ್ ಸಾಲಿಯಾನ್ (ಬಿಎಸ್‌ಪಿ) - 4713
ಮುಹಮ್ಮದ್ ಇಲ್ಯಾಸ್ (ಎಸ್‌ಡಿಪಿಐ)- 46839
ವಿಜಯ್ ಶ್ರೀನಿವಾಸ್ ಸಿ. (ಉತ್ತಮ ಪ್ರಜಾಕೀಯ ಪಕ್ಷ)- 1629
ಸುಪ್ರೀತ್ ಕುಮಾರ್ ಪೂಜಾರಿ (ಹಿಂದೂಸ್ತಾನ್ ಜನತಾ ಪಾರ್ಟಿ)- 948
ಅಬ್ದುಲ್ ಹಮೀದ್ (ಪಕ್ಷೇತರ)- 554
ಅಲೆಕ್ಸಾಂಡರ್ (ಪಕ್ಷೇತರ)- 2752
ದೀಪಕ್ ರಾಜೇಶ್ ಕುವೆಲ್ಲೋ (ಪಕ್ಷೇತರ)- 748
ಮುಹಮ್ಮದ್ ಖಾಲಿದ್ (ಪಕ್ಷೇತರ)- 602
ಮ್ಯಾಕ್ಸಿಂ ಪಿಂಟೋ (ಪಕ್ಷೇತರ)- 908
ವೆಂಕಟೇಶ್ ಬೆಂಡೆ (ಪಕ್ಷೇತರ)- 1702
ಎಚ್. ಸುರೇಶ್ ಪೂಜಾರಿ (ಪಕ್ಷೇತರ)- 2315
ನೋಟಾ- 7380

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News