ಮಂಗಳೂರು: ವಿಮಾನ ನಿಲ್ದಾಣದಲ್ಲಿ 2.96 ಲಕ್ಷ ರೂ. ಮೌಲ್ಯದ ಚಿನ್ನ ಪತ್ತೆ

Update: 2019-05-23 14:42 GMT

ಮಂಗಳೂರು, ಮೇ 23: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುರುವಾರ ಕಸ್ಟಮ್ ಅಧಿಕಾರಿಗಳು ದುಬೈಯಿಂದ ಆಗಮಿಸಿದ ಪ್ರಯಾಣಿಕನೊಬ್ಬನಿಂದ 2,96,823 ರೂ. ಮೌಲ್ಯದ 91.050 ಗ್ರಾಂ 24 ಕ್ಯಾರೆಟ್ ಪರಿಶುದ್ಧ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ.

ದುಬೈಯಿಂದ ವಿಮಾನದ ಮೂಲಕ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಯಾಣಿಕನೊಬ್ಬನನ್ನು ಕಸ್ಟಮ್ ಅಧಿಕಾರಿಗಳು ಸಂಶಯದ ಮೇರೆಗೆ ತಪಾಸಣೆ ನಡೆಸಿದ್ದಾರೆ. ಈ ಸಂದರ್ಭ ಆತನ ಬ್ಯಾಗ್‌ನಲ್ಲಿ ಲಕ್ಸ್ ಸೋಪ್ ಪತ್ತೆಯಾಗಿದ್ದು, ಆತ ಅದರ ಒಳಗೆ ಚಿನ್ನದ ಗಟ್ಟಿಯನ್ನು ಅಡಗಿಸಿಟ್ಟು ಸಾಗಾಟ ಮಾಡಿದ್ದ. ಆರೋಪಿ ಹಾಗೂ ಚಿನ್ನವನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ ಎಂದು ಕಸ್ಟಮ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News