ಮಹಾರಾಷ್ಟ್ರದ 41 ಲೋಕಸಭಾ ಕ್ಷೇತ್ರಗಳು ಬಿಜೆಪಿ-ಸೇನೆ ತೆಕ್ಕೆಗೆ

Update: 2019-05-23 16:45 GMT

ಮುಂಬೈ, ಮೇ.23: ಮಹಾರಾಷ್ಟ್ರದ 48 ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಪಿ-ಶಿವಸೇನೆ ಮೈತ್ರಿಕೂಟ 41 ಸ್ಥಾನಗಳಲ್ಲಿ ಮೇಲುಗೈ ಸಾಧಿಸಿದೆ.

ಇಲ್ಲಿನ ನಂದುರ್ಬಾರ್ ಕ್ಷೇತ್ರದಲ್ಲಿ ಬಿಜೆಪಿಯ ಹೀನಾ ಗವಿತ್ ಗೆಲುವು ಸಾಧಿಸಿದ್ದರೆ ಈಶಾನ್ಯ ಮುಂಬೈಯಲ್ಲಿ ಮನೋಜ್ ಕೋಟಕ್ ಮತ್ತು ಮುಂಬೈ ದಕ್ಷಿಣ ಕೇಂದ್ರದಲ್ಲಿ ಶಿವಸೇನೆಯ ರಾಹುಲ್ ಶಿವಲೆ ಗೆಲುವಿನ ನಗೆ ಬೀರಿದ್ದಾರೆ. ಉಳಿದಂತೆ 21 ಕ್ಷೇತ್ರಗಳಲ್ಲಿ ಮತದಾರ ಬಿಜೆಪಿ ಕೊರಳಿಗೆ ವಿಜಯ ಮಾಲೆ ಹಾಕಿದ್ದರೆ, 17 ಕ್ಷೇತ್ರಗಳಲ್ಲಿ ಶಿವಸೇನೆ ಅಧಿಪತ್ಯ ಸಾಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News