ಅಕ್ರಮ ಮರಳು ಸಾಗಾಟ: ಓರ್ವನ ಸೆರೆ
Update: 2019-05-23 22:38 IST
ಮಲ್ಪೆ, ಮೇ 23: ಪಡುತೋನ್ಸೆ ಗ್ರಾಮದ ಕಂಬಳತೋಟ ಎಂಬಲ್ಲಿರುವ ಸ್ವರ್ಣ ನದಿಯಿಂದ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಓರ್ವನನ್ನು ಮಲ್ಪೆ ಪೊಲೀಸರು ಮೇ 23ರಂದು ಬಂಧಿಸಿದ್ದಾರೆ.
ಹೂಡೆಯ ಹಿದಾಯತುಲ್ಲಾ ಎಫ್.ಎಂ. ಬಂಧಿತ ಆರೋಪಿ. ಈತನಿಂದ ಐದು ಸಾವಿರ ರೂ. ಮೌಲ್ಯದ ಒಂದು ಟನ್ ಮರಳು ಸಹಿತ ಈಚರ್ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಮಲ್ಪೆಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.