ಬಿ.ವೈ.ರಾಘವೇಂದ್ರಗೆ ಬೈಂದೂರು ಕ್ಷೇತ್ರದಲ್ಲಿ ಗರಿಷ್ಠ ಮತ

Update: 2019-05-23 17:09 GMT

ಕುಂದಾಪುರ, ಮೇ 23: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪರನ್ನು 2,22,360 ಮತಗಳ ಅಂತರದಲ್ಲಿ ಸೋಲಿಸಿದ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ, ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳ ಪೈಕಿ ಅತಿ ಹೆಚ್ಚು ಮತಗಳನ್ನು ಉಡುಪಿ ಜಿಲ್ಲೆಯ ಬೈಂದೂರು ಕ್ಷೇತ್ರದಲ್ಲಿ ಪಡೆದಿದ್ದಾರೆ.

ರಾಘವೇಂದ್ರ 7,29,872 ಮತಗಳನ್ನು ಪಡೆದರೆ, ಮಧು ಬಂಗಾರಪ್ಪ 5,06,512 ಮತಗಳನ್ನು ಗಳಿಸಿದ್ದಾರೆ. ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ರಾಘವೇಂದ್ರ ಅವರಿಗೆ 1,17,401 ಮತ ಹಾಗೂ ಮಧು ಅವರಿಗೆ 43,789 ಮತಗಳು ಸಿಕ್ಕಿವೆ. ಈ ಕ್ಷೇತ್ರದಲ್ಲಿ ರಾಘವೇಂದ್ರ ಗರಿಷ್ಠ 76,712 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.

ಅದೇ ರೀತಿ ರಾಘವೇಂದ್ರ ಅವರು ಸಾಗರ- 16,650, ಸೊರಬ- 2,821, ಶಿವಮೊಗ್ಗ ಗ್ರಾಮಾಂತರ -18,246, ಶಿವಮೊಗ್ಗ ನಗರ- 57,908, ಭದ್ರಾವತಿ - 5,645 ಶಿಕಾರಿಪುರ - 21,277, ತೀರ್ಥಹಳ್ಳಿ - 29,531 ಮತಗಳ ಅಂತರದ ಮುನ್ನಡೆ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News