ಛತ್ತೀಸ್‌ಗಡದ ಒಂಬತ್ತು ಲೋಕಸಭಾ ಕ್ಷೇತ್ರಗಳು ಬಿಜೆಪಿ ಪಾಲು

Update: 2019-05-23 17:18 GMT

ರಾಯ್‌ಪುರ, ಮೇ.23: ಹನ್ನೊಂದು ಲೋಕಸಭಾ ಕ್ಷೇತ್ರಗಳಿರುವ ಛತ್ತೀಸ್‌ಗಡದಲ್ಲಿ ಬಿಜೆಪಿ ಒಂಬತ್ತು ಕ್ಷೇತ್ರಗಳನ್ನು ತನ್ನದಾಗಿಸಿಕೊಂಡಿದೆ. ಆರು ತಿಂಗಳ ಹಿಂದೆ ಛತ್ತೀಸ್‌ಗಡದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮತದಾರ ಬಿಜೆಪಿಯ ಹದಿನೈದು ವರ್ಷಗಳ ಆಳ್ವಿಕೆಗೆ ಕೊನೆಹಾಡಿ ಕಾಂಗ್ರೆಸ್ ಕೈಗೆ ಅಧಿಕಾರ ನೀಡಿದ್ದ.

 ಅಂದಿನ ಫಲಿತಾಂಶವನ್ನು 2019ರ ಲೋಕಸಭಾ ಚುನಾವಣೆಯ ಮುನ್ನುಡಿಯೆಂದೇ ವ್ಯಾಖ್ಯಾನಿಸಲಾಗಿತ್ತು. 2004ರಿಂದೀಚೆಗಿನ ಮೂರು ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿ ಛತ್ತೀಸ್‌ಗಡದ 11 ಸ್ಥಾನಗಳ ಪೈಕಿ ಪ್ರತಿಬಾರಿಯೂ 10 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ರಾಯ್‌ಪುರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಸುನಿಲ್ ಸೋನಿ, ದುರ್ಗ್‌ನಲ್ಲಿ ವಿಜಯ್ ಬೇಲ್, ರಾಜ್‌ನಂದನ್‌ಗಾಂವ್‌ನಲ್ಲಿ ಸಂತೋಶ್ ಪಾಂಡೆ, ರಾಯ್‌ಘಡ್‌ನಲ್ಲಿ ಗೋಮ್ತಿ ಸಾಯಿ, ಸುರ್ಗುಜದಲ್ಲಿ ರೇಣುಕಾ ಸಿಂಗ್, ಜಂಜ್ಗಿರ್-ಚಂಪಾದಲ್ಲಿ ಗುಹರಮ್ ಅಜ್ಗಲ್ಲೆ, ಕಂಕೆರ್‌ನಲ್ಲಿ ಮೋಹನ್ ಮಂಡವಿ, ಮಹಸಮುಂಡ್‌ನಲ್ಲಿ ಚುನ್ನಿಲಾಲ್ ಸಾಹು ಗೆಲುವು ಸಾಧಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News