ಉಡುಪಿ ಜಿಲ್ಲೆಯಲ್ಲಿ ಭಾರೀ ಮುನ್ನಡೆ ಪಡೆದ ಶೋಭಾ ಕರಂದ್ಲಾಜೆ

Update: 2019-05-23 17:22 GMT

ಉಡುಪಿ, ಮೇ 23: ಶೋಭಾ ಕರಂದ್ಲಾಜೆ ಅವರಿಗೆ ಕಳೆದ ಬಾರಿಯಂತೆ ಈ ಬಾರಿಯೂ ಉಡುಪಿ ಜಿಲ್ಲೆಯ ಜನತೆ ಸಂಪೂರ್ಣವಾಗಿ ಕೈಹಿಡಿದು ಮುನ್ನಡೆಸಿದೆ. ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳು ಶೋಭಾಗೆ 2,24,671 ಮತಗಳ ಮ್ನುನಡೆಯನ್ನು ನೀಡಿದರೆ, ಚಿಕ್ಕಮಗಳೂರು ಜಿಲ್ಲೆಯ ನಾಲ್ಕು ವಿಧಾನ ಸಭಾ ಕ್ಷೇತ್ರಗಳು ನೀಡಿದ್ದು 1,23,879 ಮತಗಳ ಮುನ್ನಡೆಯನ್ನು ಮಾತ್ರ ನಿರೀಕ್ಷೆಯಂತೆ ಉಡುಪಿ ಜಿಲ್ಲೆಯ ಕುಂದಾಪುರ ವಿಧಾನಸಭಾ ಕ್ಷೇತ್ರ ಅತ್ಯಧಿಕ ಮುನ್ನಡೆಯನ್ನು ನೀಡಿದ ಹೆಗ್ಗಳಿಕೆಯನ್ನು ಈ ಬಾರಿಯೂ ಉಳಿಸಿಕೊಂಡಿದೆ.

ಕುಂದಾಪುರ ವಿಧಾನಸಬಾ ಕ್ಷೇತ್ರ ಒಂದರಲ್ಲೇ ಶೋಭಾರಿಗೆ ಸಿಕ್ಕಿರುವುದು 77,196 ಮತಗಳ ಭರ್ಜರಿ ಮುನ್ನಡೆ. ನಂತರದ ಸ್ಥಾನ 58,547 ಮತಗಳ ಮುನ್ನಡೆ ನೀಡಿರುವ ಕಾರ್ಕಳ ಕ್ಷೇತ್ರದ್ದಾಗಿದೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಅತ್ಯಧಿಕ ಮುನ್ನಡೆ ನೀಡಿದ ಹೆಗ್ಗಳಿಕೆ ಇರುವುದು ತರೀಕೆರೆ ಕ್ಷೇತ್ರಕ್ಕೆ. ಇಲ್ಲಿ ಶೋಭಾರಿಗೆ ಸಿಕ್ಕಿರುವ ಮುನ್ನಡೆ 35,052 ಮತಗಳು. ನಂತರದ ಸ್ಥಾನ 33,145 ಮತಗಳ ಮ್ನುಡೆ ನೀಡಿರುವ ಚಿಕ್ಕಮಗಳೂರಿಗೆ.

ಶೋಭಾ ಕರಂದ್ಲಾಜೆ ಹಾಗೂ ಪ್ರಮೋದ್ ಮಧ್ವರಾಜ್ ಅವರು ವಿಧಾನಸಭಾ ಕ್ಷೇತ್ರವಾರು ಪಡೆದ ಮತಗಳ ವಿವರ ಹೀಗಿದೆ.

ಕುಂದಾಪುರ:ಶೋಭಾ ಕರಂದ್ಲಾಜೆ-1,12,975, ಪ್ರಮೋದ್ ಮಧ್ವರಾಜ್ -35,779, ಮುನ್ನಡೆ ಅಂತರ-77,196.

ಉಡುಪಿ: ಶೋಭಾ ಕರಂದ್ಲಾಜೆ- 1,01,507, ಪ್ರಮೋದ್ ಮಧ್ವರಾಜ್-57,246, ಮುನ್ನಡೆ ಅಂತರ-44,261.

ಕಾಪು: ಶೋಭಾ ಕರಂದ್ಲಾಜೆ-91,097, ಪ್ರಮೋದ್ ಮಧ್ವರಾಜ್- 46,430, ಮುನ್ನಡೆ ಅಂತರ-44,667.

ಕಾರ್ಕಳ: ಶೋಭಾ ಕರಂದ್ಲಾಜೆ- 97,442, ಪ್ರಮೋದ್ ಮಧ್ವರಾಜ್- 38,895, ಮುನ್ನಡೆ ಅಂತರ-58,547.

ಶೃಂಗೇರಿ: ಶೋಭಾ ಕರಂದ್ಲಾಜೆ-76,129, ಪ್ರಮೋದ್ ಮದ್ವರಾಜ್- 47,159, ಮುನ್ನಡೆ ಅಂತರ-28,970.

ಮೂಡಿಗೆರೆ: ಶೋಭಾ ಕರಂದ್ಲಾಜೆ-70,512, ಪ್ರಮೋದ್ ಮದ್ವರಾಜ್- 43,800, ಮುನ್ನಡೆ ಅಂತರ-26,712.

ಚಿಕ್ಕಮಗಳೂರು: ಶೋಭಾ ಕರಂದ್ಲಾಜೆ-87,635, ಪ್ರಮೋದ್ ಮದ್ವರಾಜ್ -54,490, ಮುನ್ನಡೆ ಅಂತರ-33,145.

ತರೀಕೆರೆ: ಶೋಭಾ ಕರಂದ್ಲಾಜೆ-80,185, ಪ್ರಮೋದ್ ಮದ್ವರಾಜ್- 45,133, ಮುನ್ನಡೆ ಅಂತರ-35,052.

ಪ್ರಮೋದ್ ಪ್ರತಿಕ್ರಿಯೆ

ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ತನ್ನ ಹೀನಾಯ ಸೋಲಿಗೆ ಟ್ವಿಟರ್ ಮೂಲಕ ಪ್ರತಿಕ್ರಿಯೆ ನೀಡಿರುವ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ‘ಬಿಜೆಪಿ ಪರವಾದ ಅಲೆಯೊಂದು ಇದ್ದರೆ, ನಾವೆಲ್ಲರೂ ಅಸಹಾಯಕರಾಗು ತ್ತೇವೆ. ಏನೇ ಇದ್ದರೂ ಮತದಾರರು ನಮ್ಮ ಧಣಿಗಳಿದ್ದಂತೆ, ಅವರು ತಮ್ಮ ತೀರ್ಪನ್ನು ನೀಡಿದ್ದಾರೆ. ನಾನು ಅದನ್ನು ಯಾವುದೇ ಕಹಿಭಾವನೆ ಇಲ್ಲದೇ ಸ್ವೀಕರಿಸಿದ್ದೇನೆ’. ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News