ಮೇ 29 ರಂದು ಸ್ಮೃತಿ ದಿನ ಕಾರ್ಯಕ್ರಮ

Update: 2019-05-24 12:27 GMT

ಮಣಿಪಾಲ ಮೇ 24: ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್, ಅಕಾಡಮಿ ಆಫ್ ಜನರಲ್ ಎಜ್ಯುಕೇಶನ್ ಇವರ ಸಂಯುಕ್ತ ಆಶ್ರಯದಲ್ಲಿ ಸಿಂಡಿಕೇಟ್ ಬ್ಯಾಂಕ್ ಮಣಿಪಾಲ ಇವರ ಸಹಯೋಗದೊಂದಿಗೆ ಮಣಿಪಾಲದ ಮಹಾಚೇತನಗಳಾದ ಡಾ. ಟಿಎಂಎ ಪೈ ಹಾಗೂ ಟಿ.ಎ.ಪೈ ಇವರ ಸ್ಮೃತಿ ದಿನ ಆಚರಣೆಯು ಮೇ 29ರ ಬುಧವಾರ ಬೆಳಗ್ಗೆ 10:00ಕ್ಕೆ ಸರಿಯಾಗಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ.

ಕಾರ್ಯಕ್ರಮದಲ್ಲಿ ಮಣಿಪಾಲ ಅಕಾಡಮಿ ಆಫ್ ಜನರಲ್ ಎಜ್ಯುಕೇಶನ್‌ನ ಆಡಳಿತಾಧಿಕಾರಿ ಡಾ.ಎಚ್.ಶಾಂತಾರಾಮ್ ಮಣಿಪಾಲದ ಮಹಾನ್ ಚೇತನಗಳ ಸಂಸ್ಮರಣೆ ಮಾಡಲಿದ್ದಾರೆ. ಸಿಂಡಿಕೇಟ್ ಬ್ಯಾಂಕಿನ ಮಣಿಪಾಲ ವಲಯ ಕಚೇರಿಯ ಮಹಾ ಪ್ರಬಂಧಕ ಭಾಸ್ಕರ ಹಂದೆ ತರಕಾರಿ ಬೀಜಗಳನ್ನು ಬಿಡುಗಡೆಗೊಳಿಸುವರು.

‘ಮಹಿಳಾ ಸಬಲೀಕರಣದ ಸವಾಲುಗಳು’ ಎಂಬ ವಿಷಯದ ಕುರಿತು ಡಾ. ಟಿ.ಎಂ.ಎ.ಪೈ ಶಿಕ್ಷಣ ಮಹಾವಿದ್ಯಾಲಯದ ಸಮನ್ವಯಾಧಿಕಾರಿ ಡಾ. ಮಹಾಬಲೇಶ್ವರ ರಾವ್ ಅವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಪವರ್ ಸಂಸ್ಥೆಯ ಸ್ಥಾಪಕಾಧ್ಯಕ್ಷೆ ರೇಜು ಜಯರಾಮ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಇದೇ ಸಂದರ್ಭದಲ್ಲಿ ಬಿವಿಟಿಯಲ್ಲಿ ಹೊಲಿಗೆ, ಕಸೂತಿ, ಕರಕುಶಲತೆ ಮತ್ತು ಗೃಹ ಉತ್ಪನ್ನಗಳ ತರಬೇತಿ ಪಡೆದ ಮಹಿಳೆಯರು ತಾವೇ ತಯಾರಿಸಿದ ವಸ್ತುಗಳ ಪ್ರದರ್ಶನವನ್ನು ನೂತನ ರವೀಂದ್ರ ಮಂಟಪದ ಆವರಣದಲ್ಲಿ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ಏರ್ಪಡಿಸಲಾಗಿದೆ ಎಂದು ಭಾರತೀಯ ವಿಕಾಸ ಟ್ರಸ್ಟ್‌ನ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News