ಉಡುಪಿ: ಆಯುರ್ವೇದ ಕಾಸ್ಮೆಟೊಲೊಜಿ ಶಿಕ್ಷಣ ಶಿಬಿರ ಉದ್ಘಾಟನೆ

Update: 2019-05-24 14:54 GMT

ಉಡುಪಿ, ಮೇ 24: ಕುತ್ಪಾಡಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಆಯುರ್ವೇದ ಕಾಸ್ಮೆಟೊಲೊಜಿ (ಆಯುರ್ವೇದ ಪದ್ಧತಿಯಲ್ಲಿ ಸೌಂದರ್ಯ ವರ್ಧಕ ಚಿಕಿತ್ಸೆ) ಒಂದು ತಿಂಗಳ ಶಿಕ್ಷಣ ಶಿಬಿರವು ಇತ್ತೀಚೆಗೆ ಉದ್ಘಾಟನೆಗೊಂಡಿತು.

ಶಿಬಿರದಲ್ಲಿ ಆಯುರ್ವೇದ ಶಾಸ್ತ್ರದಲ್ಲಿ ತಿಳಿಸಿರುವ ವಿವಿಧ ಗಿಡಮೂಲಿಕೆ ದ್ರವ್ಯಗಳನ್ನು ಉಪಯೋಗಿಸಿ, ಸೌಂದರ್ಯ ವರ್ದಕ ಚಿಕಿತ್ಸಾ ವಿಧಾನ ಹಾಗೂ ವಿವಿಧ ಉತ್ಪನ್ನಗಳ ತಯಾರಿಕೆಗಳ ಕುರಿತು ಮಾಹಿತಿ ಹಾಗೂ ಸೌಂದರ್ಯ ಶಾಸ್ತ್ರದ ಸೈದ್ದಾಂತಿಕ ಅಂಶಗಳ ಕುರಿತು ಉಪನ್ಯಾಸ ನೀಡಲಾಗುವುದು.

ಮುಖ್ಯ ಅಥಿತಿಯಾಗಿ ಸಿಂಡಿಕೇಟ್ ಬ್ಯಾಂಕಿನ ಮುಖ್ಯಕಾರ್ಯನಿರ್ವಹಣಾ ಧಿಕಾರಿ ಮೃತ್ಯುಂಜಯ ಮಹಾಪಾತ್ರ ಶಿಬಿರವನ್ನು ಉದ್ಘಾಟಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ.ಜಿ.ಶ್ರೀನಿವಾಸ ಆಾರ್ಯ ಅಧ್ಯಕ್ಷತೆಯನ್ನು ವಹಿಸಿದ್ದರು.

ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ.ಮಮತಾ ಕೆ.ವಿ., ಕಾಲೇಜಿನ ಪಿ.ಜಿ. ಡೀನ್ ಡಾ.ನಿರಂಜನ್ ರಾವ್, ಅಸೋಸಿಯೇಟ್ ಡೀನ್ ಡಾ.ನಾಗರಾಜ್ ಎಸ್. ಯು.ಜಿ. ಡೀನ್ ಡಾ.ಸುಚೇತಾ ಕುಮಾರಿ, ಕ್ಷೇಮಪಾಲನಾ ಅಧಿಕಾರಿ ಾ.ವೀರ ಕುಮಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News