ಗರ್ವಿಷ್ಠರನ್ನು ತಿದ್ದಿ ಬುದ್ಧಿ ಕಲಿಸುವವ ಶನಿಪರಮಾತ್ಮ: ಬಾಳೆಕುದ್ರು ಶ್ರೀ

Update: 2019-05-24 14:56 GMT

ಕುಂದಾಪುರ, ಮೇ 24: ಪ್ರಪಂಚದಲ್ಲಿ ಧರ್ಮ ನಶಿಸಿ ಅಧರ್ಮ ತಾಂಡವ ವಾಡುತ್ತಿರುವಾಗ ತ್ರಿಮೂರ್ತಿಗಳ ಸಂಕಲ್ಪದಂತೆ ಜನಿಸಿದ ಸೂರ್ಯ ಹಾಗೂ ಛಾಯಾದೇವಿಯ ಸುಕುಮಾರ ಶನಿದೇವ ದುಷ್ಟರನ್ನು ಶಿಕ್ಷಿಸಿ ಶಿಷ್ಟರನ್ನು ಪರಿ ಪಾಲಿಸಿ ಗರ್ವಿಷ್ಟರಿಗೆ ವಿಧ ವಿಧ ಕಷ್ಟ ಕಾರ್ಪಣ್ಯವನ್ನು ನೀಡಿ ತಿದ್ದಿ ಬುದ್ಧಿ ಕಲಿಸುವ ದೇವನೇ ಶನಿಪರಮಾತ್ಮನಾಗಿದ್ದಾನೆ ಎಂದು ಹಂಗಾರಕಟ್ಟೆ ಬಾಳೆಕುದ್ರು ಶ್ರೀನೃಸಿಂಹಾಶ್ರಮ ಸ್ವಾಮೀಜಿ ಹೇಳಿದ್ದಾರೆ.

ಬಾಡಬೆಟ್ಟು ಕೂಡ್ಲು ಶ್ರೀಶನೀಶ್ವರ ಮತ್ತು ಚೌಡೇಶ್ವರಿ ದೇವಸ್ಥಾನದ ಪ್ರತಿಷ್ಠಾ ವರ್ಧಂತ್ಯೋತ್ಸವ ಪ್ರಯುಕ್ತ ಇತ್ತೀಚೆಗೆ ಜರಗಿದ ಧಾರ್ಮಿಕ ಸಭೆಯಲ್ಲಿ ಅವರು ಆಶೀವರ್ಚನ ನೀಡಿದರು. 

ಅಧ್ಯಕ್ಷತೆಯನ್ನು ಬಸ್ರೂರು ಮಹಾಲಿಂಗೇಶ್ವರ ದೇವಸ್ಥಾನದ ಬಿ.ಅಪ್ಪಣ್ಣ ಹೆಗ್ಡೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೋಟಿಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಗೋಪಾಲಕೃಷ್ಣ ಶೆಟ್ಟಿ, ಜ್ಯೋತಿಷಿ ಶ್ರೀಧರ ಮಂಜ, ನೇರಳಕಟ್ಟೆ ಗುರುರಾಜ ಸೋಮಯಾಜಿ, ವಾಸ್ತುತಜ್ಞ ಬಸವರಾಜ್ ಶೆಟ್ಟಿಗಾರ್, ಸಾಲಿ ಗ್ರಾಮ ಮೇಳದ ಕಿಶನ್ ಕುಮಾರ್ ಹೆಗ್ಡೆ, ಹಂಗಳೂರು ಶನೀಶ್ವರ ದೇವಸ್ಥಾನದ ಅಧ್ಯಕ್ಷ ಅಣ್ಣಯ್ಯ ಪೂಜಾರಿ, ಛಾಯಾನಂದನ ಮಂಡಳಿಯ ಸಂಚಾಲಕ ಅಣ್ಣು ಪೂಜಾರಿ, ಹಟ್ಟಿಯಂಗಡಿ ಲೋಕನಾಥೇಶ್ವರ ದೇವಸ್ಥಾನದ ಅಧ್ಯಕ್ಷ ಸನತ್ ಕುಮಾರ್ ರೈ, ಕರುಣಾಕರ ಶೆಟ್ಟಿ, ಮುಂಬಯಿ ಚಿತ್ತಾರಿ ಫೌಂಡೇಶನ್‌ನ ಜಯರಾಮ್ ಶೆಟ್ಟಿ, ಸುದೇಶ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

ಜೀಣೋದ್ಧಾರ ಸಮಿತಿಯ ಅಧ್ಯಕ್ಷ ವಿಶ್ವಾಸ್ ಶೆಟ್ಟಿ ಸ್ವಾಗತಿಸಿದರು. ಮೊಕ್ತೇಸರ ಮರ್ಲಣ್ಣ, ಧರ್ಮದರ್ಶಿ ಜಯರಾಮ ಬಾಡಬೆಟ್ಟು ಅತಿಥಿಗಳನ್ನು ಗೌರವಿಸಿ ದರು. ರಮೇಶ್ ಶೆಟ್ರಕಟ್ಟೆ ಕಾರ್ಯಕ್ರಮ ನಿರೂಪಿಸಿದರು. ರಾಜೇಶ್ ಸೌಕೂರು ಸಂಯೋಜಿಸಿದರು. ನಾಗರಾಜ ಕೆಂಚನೂರು ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News