ಹೆರ್ಗ: ಕೃಷಿ ವಿಚಾರ ವಿನಿಮಯ ಕೇಂದ್ರ ಉದ್ಘಾಟನೆ

Update: 2019-05-24 15:02 GMT

ಮಣಿಪಾಲ, ಉಡುಪಿ, ಮೇ 24: ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಮತ್ತು ಸೆಲ್ಕೋ ಫೌಂಡೇಶನ್ ಬೆಂಗಳೂರು ಇವುಗಳ ಜಂಟಿ ಸಹಯೋಗದಲ್ಲಿ ಆರನೇ ಕೃಷಿ ವಿಚಾರ ವಿನಿಮಯ ಕೇಂದ್ರವೊಂದನ್ನುಹೆರ್ಗ ಹಾಲು ಉತ್ಪಾದಕರ ಸಂಘದ ಆಶ್ರಯದಲ್ಲಿ ಹೆರ್ಗದಲ್ಲಿ ಇತ್ತೀಚೆಗೆ ಉದ್ಘಾಟಿಸಲಾಯಿತು.

ಹೆರ್ಗ ಹಾಲು ಉತ್ಪಾದರ ಸಂಘದ ಅಧ್ಯಕ್ಷ ಹೆರ್ಗ ದಿನಕರ ಶೆಟ್ಟಿ ದೀಪ ಬೆಳಗಿಸಿ ಕೇಂದ್ರವನ್ನು ಉದ್ಘಾಟಿಸಿದರು. ರೈತರು ಮತ್ತು ಹೈನುಗಾರರು ಎದುರಿಸು ತ್ತಿರುವ ಸಮಸ್ಯೆಗಳಿಗೆ ಸ್ಥಳೀಯವಾಗಿಯೇ ಪರಿಹಾರ ಕಂಡುಕೊಳ್ಳಬೇಕು. ಈ ನಿಟ್ಟಿನಲ್ಲಿ ಕೃಷಿಕರನ್ನು ಒಗ್ಗೂಡಿಸಿ ವಿಚಾರ ವಿನಿಮಯ ನಡೆಸುವ ಈ ಕ್ರಮ ಸ್ವಾಗತಾರ್ಹ ಎಂದರು.

ಬಿವಿಟಿಯ ಸಂಯೋಜನಾಧಿಕಾರಿ ನಿತ್ಯಾನಂದ ಭಟ್ ಭರಣೇಕರ್ ಮಾತನಾಡಿ, ಕೃಷಿ ವಿಚಾರ ವಿನಿಮಯ ಕೇಂದ್ರಗಳ ಹಿನ್ನೆಲೆ ಮತ್ತು ಉದ್ದೇಶದ ಬಗ್ಗೆ ಮಾಹಿತಿ ನೀಡಿದರು. ಬಿವಿಟಿಯ ಪ್ರಬಂಧಕ ಅರುಣ ಪಟವರ್ಧನ ಸೌರಶಕ್ತಿಯ ವಿವಿಧ ಉಪಯೋಗಗಳು ಮತ್ತು ಮಳೆ ನೀರು ಕೊ್ಲುನ ಕುರಿತು ಉಪನ್ಯಾಸ ನೀಡಿದರು.

ಹೆರ್ಗ ಹಾಲು ಉತ್ಪಾದಕರ ಸಂಘದ ಉಪಾಧ್ಯಕ್ಷ ಜಯಕುಮಾರ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ಅಶ್ವಿನಿ ವಂದಿಸಿದರು. ಹೆರ್ಗ ಪರಿಸರದ ಹೈನುಗಾರರು ಮತ್ತು ಕೃಷಿಕರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News