ದೇಶದಲ್ಲೇ ಅತೀಹೆಚ್ಚು ಮತಗಳ ಅಂತರದಿಂದ ಗೆದ್ದದ್ದು ಯಾರು ಗೊತ್ತಾ?

Update: 2019-05-24 15:03 GMT

ಹೊಸದಿಲ್ಲಿ, ಮೇ.24: ಭಾರತೀಯ ಜನತಾ ಪಕ್ಷದ ಸಿ.ಆರ್ ಪಾಟೀಲ್ 2019ರ ಲೋಕಸಭಾ ಚುನಾವಣೆಯಲ್ಲಿ ದೇಶದಲ್ಲೇ ಅತೀಹೆಚ್ಚು ಮತಗಳ ಅಂತರದಿಂದ ಜಯ ಗಳಿಸಿದ ಅಭ್ಯರ್ಥಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಗುಜರಾತ್‌ನ ನವ್ಸಾರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸಿ.ಆರ್ ಪಾಟೀಲ್ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ 6.89 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಪಾಟೀಲ್, ಅತೀಹೆಚ್ಚು ಮತಗಳ ಅಂತರದಿಂದ ಜಯಗಳಿಸಿದ ದಾಖಲೆ ನಿರ್ಮಿಸಲು ಕೆಲವೇ ಸಾವಿರ ಮತಗಳು ಕಡಿಮೆಯಾಗಿವೆ. 2014ರ ಅಕ್ಟೋಬರ್‌ನಲ್ಲಿ ಮಾಜಿ ಕೇಂದ್ರ ಸಚಿವ ಗೋಪಿನಾಥ್ ಮುಂಡೆ ನಿಧನದ ಹಿನ್ನೆಲೆಯಲ್ಲಿ ಅವರ ಪುತ್ರಿ ಪ್ರೀತಂ ಮುಂಡೆ ಮಹಾರಾಷ್ಟ್ರದ ಬೀಡ್ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ 6.96 ಲಕ್ಷ ಮತಗಳ ಅಂತರದಿಂದ ಜಯಭೇರಿ ಬಾರಿಸಿದ್ದರು. ಇನ್ನು, ಅತೀಕಡಿಮೆ ಮತಗಳ ಅಂತರದಿಂದ ಜಯ ಗಳಿಸಿದ ಸಾಧನೆ ಮಾಡಿದವರೂ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ.

ಉತ್ತರ ಪ್ರದೇಶದ ಮಚ್‌ಲಿಶೆಹರ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬೋಲಾನಾಥ್ ಕೇವಲ 181 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News