ಮಣಿಪಾಲ: ಕಸೂತಿ, ಕ ಕುಶಲತೆ ತರಬೇತಿ ಸಮಾರೋಪ

Update: 2019-05-24 15:07 GMT

ಮಣಿಪಾಲ, ಮೇ 24: ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟಿನಲ್ಲಿ ಸೆಲ್ಕೋ ಪೌಂಡೇಶನ್ ಪ್ರಾಯೋಜಕತ್ವದಲ್ಲಿ ಆಯೋಜಿಸಲಾದ 4 ವಾರಗಳ ಕಸೂತಿ, ಕರಕುಶಲತೆ ತರಬೇತಿಯ ಸಮಾರೋಪ ಸಮಾರಂಭ ಶಿವಳ್ಳಿಯ ಭಾರತೀಯ ವಿಕಾಸ ಟ್ರಸ್ಟಿನಲ್ಲಿ ಇತ್ತೀಚೆಗೆ ನಡೆಯಿತು.

ಶಿಕ್ಷಣ ಇಲಾಖೆ ಪರಿವೀಕ್ಷಣಾಧಿಕಾರಿ ನಾಗರಾಜ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಕಸೂತಿ ಈಗ ಬಹು ಬೇಡಿಕೆ ಇರುವ ಕೌಶಲ್ಯವಾಗಿದ್ದು ಕಸೂತಿ ಕಲಿತವರು ಉತ್ತಮ ಆದಾಯ ಪಡೆಯಲು ಅವಕಾಶವಿದೆ. ಇಲ್ಲಿ ತರಬೇತಿ ಮುಗಿಸಿರುವ ಶಿಬಿರಾರ್ಥಿಗಳು ಈ ಕ್ಷೇತ್ರದಲ್ಲಿ ಯಶಸ್ಸನ್ನು ಹೊಂದಲಿ ಎಂದು ಹಾರೈಸಿ ಭಾಗವಹಿಸಿದ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರವನ್ನು ವಿತರಿಸಿದರು.

ಇನ್ನೊಬ್ಬ ಅತಿಥಿ ಸೆಲ್ಕೋ ಸಂಸ್ಥೆಯ ಮಹಾಪ್ರಬಂಧಕ ಜಗದೀಶ್ ಪೈ ತರಬೇತಿಯಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳು ತರಬೇತಿ ಅವಧಿಯಲ್ಲಿ ತಯಾರಿಸಿ ಪ್ರದರ್ಶಿಸಿದ ವಸ್ತುಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಬಿವಿಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮನೋಹರ ಕಟ್ಗೇರಿ ಸ್ವಾಗತಿಸಿದರೆ, ಬಿವಿಟಿಯ ಮುಖ್ಯ ಕಾರ್ಯಕ್ರಮ ಸಂಯೋಜಕಿ ಲಕ್ಷ್ಮೀಬಾಯಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಸಂಪನ್ನೂಲ ವ್ಯಕ್ತಿ ಮುಕ್ತಾ ಶ್ರೀನಿವಾಸ ಭಟ್, ಬಿವಿಟಿ ಆಡಳಿತಾಧಿಕಾರಿ ಐ.ಜಿ.ಕಿಣಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಡುಪಿ, ದ.ಕ. ಜಿಲ್ಲೆಯ 20ಕ್ಕೂ ಅಧಿಕ ಶಿಬಿರಾರ್ಥಿಗಳು ತರಬೇತಿಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News