×
Ad

ಮಂಗಳೂರು: ಎತ್ತರ ಪ್ರದೇಶಕ್ಕೆ ತಲುಪದ ನೀರು

Update: 2019-05-24 21:06 IST

ಮಂಗಳೂರು, ಮೇ 24: ತುಂಬೆಯಿಂದ ನೀರು ಪಂಪಿಂಗ್ ಆರಂಭವಾಗಿದ್ದು, ಶುಕ್ರವಾರ ಬೆಳಗ್ಗೆ 6 ಗಂಟೆಯಿಂದ ಪೂರೈಕೆ ಆರಂಭವಾಗಿದೆ. ನಗರದ ತಗ್ಗು ಪ್ರದೇಶದ ಶೇ.50ರಷ್ಟು ಪ್ರದೇಶಗಳಿಗೆ ನೀರು ಪೂರೈಕೆಯಾಗಿದೆ. ಉಳಿದಂತೆ ಎತ್ತರ ಪ್ರದೇಶ ಸೇರಿದಂತೆ ಶೇ.50ರಷ್ಟು ಪ್ರದೇಶಕ್ಕೆ ಎಂದಿನಂತೆ ಟ್ಯಾಂಕರ್‌ನಲ್ಲಿ ನೀರು ಸರಬರಾಜು ನಡೆದಿದೆ.

ಶುಕ್ರವಾರ ತುಂಬೆಯಲ್ಲಿ 11 ಸೆಂ.ಮೀ. ನೀರು ಕಡಿಮೆಯಾಗಿದ್ದು, ನೀರಿನ ಮಟ್ಟ 3.30ಮೀ.ಗೆ ತಲುಪಿದೆ. ಪಿಕಪ್ ಮತ್ತು ಟ್ಯಾಂಕರ್‌ಗಳು ಸೇರಿ 21 ವಾಹನಗಳಲ್ಲಿ ನೀರು ಪೂರೈಕೆ ನಡೆಯುತ್ತಿದೆ. ಎರಡು ಹೆಚ್ಚುವರಿ ಖಾಸಗಿ ಟ್ಯಾಂಕರ್‌ಗಳನ್ನು ಆರ್‌ಟಿಒ ಮೂಲಕ ಪಡೆಯಲಾಗಿದೆ.

ಶನಿವಾರವೂ ತುಂಬೆಯಿಂದ ದಿನವಿಡೀ ನೀರು ಪಂಪಿಂಗ್ ಆಗಲಿದ್ದು, ಸಾರ್ವಜನಿಕರಿಗೆ ನಿಗದಿತ ಅವಧಿಯಲ್ಲಿ ಪೂರೈಕೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News