ಅಂಬೇಡ್ಕರ್ ಯುವಸೇನೆಯಿಂದ ಉಚಿತ ನೀರು ವಿತರಣೆ

Update: 2019-05-24 15:48 GMT

ಮಲ್ಪೆ, ಮೇ 24: ಜಲಕ್ಷಾಮದಿಂದ ಪರದಾಡುತ್ತಿರುವ ಜನರ ಪ್ರತಿನಿತ್ಯದ ಬವಣೆಯನ್ನು ಕಂಡು ಉಡುಪಿ ಅಂಬೇಡ್ಕರ್ ಯುವಸೇನೆ ವತಿಯಿಂದ ಪ್ರತಿ ದಿನ ಉಚಿತ ನೀರು ಸರಬರಾಜು ಮಾಡಲಾಗುತ್ತಿದೆ.

ಉಡುಪಿ ನಗರದ ಸುತ್ತಮುತ್ತ ಹಾಗೂ ಗ್ರಾಮೀಣ ಪ್ರದೇಶಗಳಾದ ಕಪ್ಪೆಟ್ಟು, ಅಂಬಲಪಾಡಿ, ಕಾಡಬೆಟ್ಟು, ಕಿದಿಯೂರು, ಮೂಡಬೆಟ್ಟು, ಲಕ್ಷ್ಮೀನಗರ, ನೇಜಾರು, ಕೊಳಲಗಿರಿ, ಹಾವಂಜೆ, ಚಿಟ್ಪಾಡಿ, ಕಿನ್ನಿಮುಲ್ಕಿ, ಕದ್ಕೆ, ತೊಟ್ಟಂ, ಗುಜ್ಜರಬೇಟ್ಟು ಮೊದಲಾದ ಪ್ರದೇಶಗಳಿಗೆ ಉಚಿತ ನೀರು ವಿತರಿಸಲಾಗುತ್ತಿದೆ ಎಂದು ಯುವಸೇನೆ ಅಧ್ಯಕ್ಷ ಹರೀಶ ಸಾಲ್ಯಾನ್ ತಿಳಿಸಿದ್ದಾರೆ.

ಯುವಸೇನೆಯ ಪದಾಧಿಕಾರಿಗಳೇ ತಮ್ಮ ಸ್ವಂತ ಖರ್ಚಿನಿಂದ ಈ ಸೇವೆ ಯನ್ನು ಮಾಡುತ್ತಿದ್ದಾರೆ. ಜಗದೀಶ್ ಪೂಜಾರಿ ತೊಟ್ಟಂ ತಮ್ಮ ಬಾವಿಯಲ್ಲಿ ಉಚಿತ ನೀರು ನೀಡಿದರೆ, ಲಕ್ಷ್ಮೀನಗರದ ಲಾರಿ ಮಾಲಕ ಹಾಗೂ ಚಾಲಕ ರವಿ ತಮ್ಮ ಲಾರಿಯಲ್ಲಿ ಉಚಿತ ಸೇವೆಯನ್ನು ನೀಡುತ್ತಿದ್ದಾರೆ.

ದಲಿತ ಚಿಂತಕ ಜಯನ್ ಮಲ್ಪೆ, ಸುಂದರ್ ಕಪ್ಪೆಟ್ಟು, ರಮೇಶ್‌ಪಾಲ್, ಗಣೇಶ್ ನೆರ್ಗಿಯವರ ಮಾರ್ಗದರ್ಶನದಲ್ಲಿ ಪ್ರತಿದಿನ ಮುಂಜಾಣೆಯಿಂದ ರಾತ್ರಿ ತನಕ ಉಚಿತ ನೀರು ಸರಬರಾಜು ಮಾಡುವ ಈ ಕಾರ್ಯದಲ್ಲಿ ಅಂಬೇಡ್ಕರ್ ಯುವಸೇನೆಯ ಗುಣವಂತ ತೊಟ್ಟಂ, ಸಂತೋಷ್ ಕಪ್ಪೆಟ್ಟು, ಮಂಜುನಾಥ ಅಮೀನ್ ಕಪ್ಪೆಟ್ಟು, ಭಗವಾನ್ ಮಲ್ಪೆ, ದಿನೇಶ್ ಮೂಡಬೇಟ್ಟು, ಸೋಮನಾಥ ಕಪ್ಪೆಟ್ಟು, ಪ್ರಶಾಂತ್ ಸಾಲ್ಯಾನ್, ಉದಯ ಕಪ್ಪೆಟ್ಟು, ಸಂತೋಷ್ ಅಮೀನ್, ಮಹೇಶ್ ಚಂಡ್ಕಳ ತೊಡಗಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News