ಕಿಡ್ನಿ ವೈಫಲ್ಯ: ಆರ್ಥಿಕ ನೆರವಿಗೆ ಕುಟುಂಬದ ಮನವಿ

Update: 2019-05-24 15:51 GMT

ಉಡುಪಿ, ಮೇ 24: ಮನೆಮನೆಗೆ ಪೇಪರ್ ಹಾಕಿ ಬದುಕು ನಡೆಸುತ್ತಿದ್ದ ವ್ಯಕ್ತಿಯೊಬ್ಬರ ಕಿಡ್ನಿ ವೈಫಲ್ಯದಿಂದ ಕುಟುಂಬ ಕಂಗಾಲಾಗಿದ್ದು, ಚಿಕಿತ್ಸೆಗಾಗಿ ಆರ್ಥಿಕ ನೆರವು ನೀಡುವಂತೆ ದಾನಿಗಳಲ್ಲಿ ಮನವಿ ಮಾಡಿದೆ.

ಬ್ರಹ್ಮಾವರ ವಾರಂಬಳ್ಳಿ ಪ್ರಣವ್ ಆಸ್ಪತ್ರೆ ಹಿಂಭಾಗದ ನಿವಾಸಿ ದಿ. ಪಾಂಡು ರಂಗ ನಾಯಕ್ ಅವರ ಪುತ್ರ ರಾಜೇಶ್ ನಾಯಕ್(33) ಎಂಬವರಿಗೆ ಮೂರು ವರ್ಷಗಳ ಹಿಂದೆ ಮಲೇರಿಯಾ ರೋಗ ಕಾಣಿಸಿಕೊಂಡಿದ್ದು, ರೋಗ ಉಲ್ಬಣ ಗೊಂಡ ಪರಿಣಾಮ ಕಿಡ್ನಿ ವೈಫಲ್ಯಕ್ಕೊಳಗಾದರು.

ಅನಂತರ ಅವರ ಚಿಕಿತ್ಸೆಗಾಗಿ ಕುಟುಂಬದವರು ನಿರಂತರವಾಗಿ ವೆಚ್ಚ ಮಾಡುತ್ತ ಬಂದಿದ್ದಾರೆ. ಅಲ್ಲದೆ ಅವರ ಲಿವರ್ ಕೂಡ ತೊಂದರೆಗೀಡಾಗಿ ಹಲವು ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಇಂದಿಗೂ ಇವರು ವಾರಕ್ಕೆರಡು ಬಾರಿ ಡಯಾಲಿಸಿಸ್ ವಾಡಿಸಿಕೊಳ್ಳುವುದು ಅನಿ ವಾರ್ಯವಾಗಿದೆ.

ಕುಟುಂಬದ ಆಧಾರ ಸ್ತಂಭವಾಗಿರುವ ರಾಜೇಶ್ ಅನಾರೋಗ್ಯ ಪೀಡಿತ ರಾಗಿ ಮನೆಯಲ್ಲಿರುವುದರಿಂದ ಕುಟುಂಬ ತೀವ್ರವಾಗಿ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದೆ. ಆದರೂ ಈ ಮಧ್ಯೆ ರಾಜೇಶ್ ನಾಯಕ್ ಪೇಪರ್‌ಗಳನ್ನು ಮನೆಮನೆಗೆ ಹಾಕುವ ಕೆಲಸವನ್ನು ಮುಂದುವರೆಸಿದ್ದಾರೆ. ಬದುಕು ನಡೆಸಲು ಇದು ಅವರಿಗೆ ಅನಿವಾರ್ಯವಾಗಿದೆ.

ಆದರೆ ಈ ಬಡ ಕುಟುಂಬಕ್ಕೆ ಅನಾರೋಗ್ಯದ ಚಿಕಿತ್ಸೆಗೆ ಹಣ ಹೊಂದಿಸು ವುದು ಕಷ್ಟವಾಗುತ್ತಿದೆ. ಆದುದರಿಂದ ದಾನಿಗಳ ಇವರ ಚಿಕಿತ್ಸೆ ನೆರವು ನೀಡು ವಂತೆ ಕುಟುಂಬ ಮನವಿ ಮಾಡಿಕೊಂಡಿದೆ. ಆರ್ಥಿಕ ನೆರವು ನೀಡುವವರು ವಿಜಯಾ ಬ್ಯಾಂಕ್ ಬ್ರಹ್ಮಾವರ ಶಾಖೆಯ ಖಾತೆ ಸಂಖ್ಯೆ 10370101 1001740, ಐಎಫ್‌ಎಸ್‌ಸಿ ಕೋಡ್ ವಿಐಜೆಬಿ0001037 ಇದಕ್ಕೆ ಜಮೆ ಮಾಡಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 809544 6584ನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News