ನರ್ಸಿಮ್‌ಕಾನ್ ಇಂಡಿಯಾ 2019: ನರ್ಸಿಂಗ್‌ನಲ್ಲಿ ಸಿಮ್ಯುಲೇಶನ್ ಬಗ್ಗೆ ರಾಷ್ಟ್ರೀಯ ಸಮಾಲೋಚನೆ

Update: 2019-05-24 15:57 GMT

ಮಂಗಳೂರು, ಮೇ 24: ನಗರದ ಫಾದರ್ ಮುಲ್ಲರ್ ಸೇವಾ ಸಂಸ್ಥೆಯಲ್ಲಿ ಫಾದರ್ ಮುಲ್ಲರ್ ಕಾಲೇಜು ಆಫ್ ನರ್ಸಿಂಗ್ ವತಿಯಿಂದ ಫಾದರ್ ಮುಲ್ಲರ್ ಸಿಮ್ಯುಲೇಶನ್ ಆ್ಯಂಡ್ ಸ್ಕಿಲ್ ಸೆಂಟರ್ ಸಹಯೋಗದೊಂದಿಗೆ ನರ್ಸಿಮ್ ಕಾನ್ ಇಂಡಿಯಾ 2019 ರಾಷ್ಟ್ರೀಯ ಸಮಾಲೋಚನೆ ಕಾರ್ಯಕ್ರಮವನ್ನು ಶುಕ್ರವಾರ ಆಯೋಜಿಸಲಾಯಿತು.

ಸಮಾಲೋಚನಾ ಕಾರ್ಯಕ್ರಮವನ್ನು ಎಎಚ್‌ಪಿಐ ಮತ್ತು ವಿಎನ್‌ಬಿವಿಐಯ ಅಧ್ಯಕ್ಷ ಹಾಗೂ ಕರ್ನಾಟಕ ಹೆಲ್ತ್‌ಕೇರ್ ಸೆಂಟರ್‌ನ ಮುಖ್ಯಸ್ಥರಾದ ಡಾ.ಅಲೆಕ್ಸಾಂಡರ್ ಥೋಮಸ್ ಉದ್ಘಾಟಿಸಿದರು.

ಫಾದರ್ ಮುಲ್ಲರ್ ಸಂಸ್ಥೆಯನ್ನು ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿದಕ್ಕೆ ಶ್ಲಾಘನಾರ್ಹ. ಅಲ್ಲದೆ, ನರ್ಸುಗಳನ್ನು ಆದಷ್ಟು ಸಬಲೀಕರಣಗೊಳಿಸುವುದು ಇಂದಿನ ಮುಖ್ಯ ಅಗತ್ಯ ವಿಷಯ ಎಂದರು.

ಸಿಮ್ಯುಲೇಶನ್ ಮತ್ತು ನರ್ಸಿಂಗ್‌ನಲ್ಲಿ ವೈದ್ಯಕೀಯ ಸಾಮರ್ಥ್ಯಗಳನ್ನು ಹೆಚ್ಚಿಸಲು ಕೌಶಲ್ಯ ತರಬೇತಿಯನ್ನು ಸಂಯೋಜಿಸುವುದು ಮತ್ತು ವೈದ್ಯಕೀಯ ತುರ್ತುಸ್ಥಿತಿಗಳನ್ನು ನಿರ್ವಹಿಸುವಲ್ಲಿ ಸಿಮ್ಯಲೇಶನ್ ತರಬೇತಿಯ ಪ್ರಭಾವವನ್ನು ಹೆಚ್ಚಿಸುವುದು, ಕೌಶಲ್ಯದ ತರಬೇತಿ ಮತ್ತು ಸಿಮ್ಯುಲೇಶನ್ ಮೆಥರ್ಡ್‌ಗಳನ್ನು ಹೇಗೆ ಬಳಸುವುದು ಎಂಬುದರ ಬಗ್ಗೆ ಆಳವಾದ ಮಾಹಿತಿ ವಿಧಾನಗಳನ್ನು ಕಂಡುಹಿಡಿಯುವುದು ಸಮ್ಮೇಳನದ ಗುರಿಯಾಗಿದೆ.

ಈ ಸಮಾಲೋಚನೆ ಕಾರ್ಯಕ್ರಮವು ಶನಿವಾರವೂ ಮುಂದುವರೆಯಲಿದ್ದು, ನರ್ಸಿಂಗ್ ಕ್ಷೇತ್ರದಲ್ಲಿ ಆರೋಗ್ಯ ಸಿಮ್ಯುಲೇಶನ್ ಶಿಕ್ಷಣದ ವ್ಯಾಪ್ತಿಯ ಬಗ್ಗೆ ನರ್ಸಿಂಗ್ ನಿರ್ವಾಹಕರು, ವೃತ್ತಿ ನಿರತರು, ಸಿಬ್ಬಂದಿ, ಸಂಶೋಧಕರು ಮತ್ತು ವಿದ್ಯಾರ್ಥಿಗಳು ಸಮಾಲೋಚನೆ ನಡೆಸಲಿದ್ದಾರೆ.

ಫಾದರ್ ಮುಲ್ಲರ್ ಸೇವಾ ಸಂಸ್ಥೆಗಳ ನಿರ್ದೇಶಕ ವಂ.ಫಾ.ರಿಚರ್ಡ್ ಅಲೋಶಿಯಸ್ ಕೊಯೆಲೊ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಫಾದರ್ ಮುಲ್ಲರ್ ಕಾಲೇಜು ಆಫ್ ನರ್ಸಿಂಗ್‌ನ ಪ್ರಾಂಶುಪಾಲೆ ಸಿಸ್ಟರ್ ಜಸಿಂತಾ ಡಿಸೋಜ, ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಡೀನ್ ಡಾ.ರಿತೇಶ್ ಡಿಕುನ್ಹ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಕಾರ್ಯಕ್ರಮದಲ್ಲಿ ಅನೇಕ ಶುಶ್ರೂಷಾ ನಿರ್ವಾಹಕರು, ವೃತ್ತಿನಿರತರು, ಸಂಶೋಧಕರು ಹಾಗೂ ಬೇರೆ ಬೇರೆ ರಾಜ್ಯಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು. ಫಾದರ್ ಮುಲ್ಲರ್ ಸಿಮ್ಯುಲೇಶನ್ ಮತ್ತು ಸ್ಕಿಲ್ ಸೆಂಟರ್‌ನ ಅಕಾಡೆಮಿಕ್ ಇನ್‌ಚಾರ್ಜ್ ಡಾ.ಲುಲು ಶರಿಫ್ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News