ಭಾರತೀಯ ಕಲಾವಿದೆ ಮಲಾನಿಗೆ 54.5 ಲ.ರೂ.ಮೌಲ್ಯದ ಜೋನ್ ಮಿರೋ ಪ್ರಶಸ್ತಿ

Update: 2019-05-24 17:11 GMT

ಬಾರ್ಸಿಲೋನಾ,ಮೇ 24: ಭಾರತೀಯ ಕಲಾವಿದೆ ನಳಿನಿ ಮಲಾನಿ ಅವರು 2019ನೇ ಸಾಲಿಗಾಗಿ ಪ್ರತಿಷ್ಠಿತ ಜೋನ್ ಮಿರೋ ಪ್ರಶಸ್ತಿಗೆ ಭಾಜನರಾಗಿದ್ದಾರೆ. 20ನೇ ಶತಮಾನದ ಅತ್ಯಂತ ಪ್ರಭಾವಿ ಕಲಾವಿದರಲ್ಲೋರ್ವರಾದ ಸ್ಪೇನ್‌ನ ಖ್ಯಾತ ವರ್ಣಚಿತ್ರ ಕಲಾವಿದ ಮತ್ತು ಶಿಲ್ಪಿ ಜೋನ್ ಮಿರೋ ಅವರ ಹೆಸರಿನಲ್ಲಿ ಪ್ರತಿ ಎರಡು ವರ್ಷಗಳಿಗೊಮ್ಮೆ ನೀಡಲಾಗುವ ಈ ಪ್ರಶಸ್ತಿಯು 70,000 ಯುರೋ(54.5 ಲ.ರೂ.)ಗಳ ನಗದು ಬಹುಮಾನವನ್ನು ಹೊಂದಿದೆ.

1946ರಲ್ಲಿ ಪಾಕಿಸ್ತಾನದ ಕರಾಚಿಯಲ್ಲಿ ಜನಿಸಿದ ಮಲಾನಿ,ಆ ರಾಷ್ಟ್ರದಲ್ಲಿ ನಿರಾಶ್ರಿತೆಯಾಗಿ ತನ್ನ ಅನುಭವಗಳು ತನ್ನ ಕಾರ್ಯಗಳ ಮೇಲೆ ಪ್ರಭಾವವನ್ನು ಹೊಂದಿವೆ ಎಂದು ಪರಿಗಣಿಸಿದ್ದಾರೆ.

ವಿಶ್ವಾದ್ಯಂತ ಧ್ವನಿಯನ್ನು ಉಡುಗಿಸಲಾಗಿರುವವರು ಮತ್ತು ಉಚ್ಚಾಟಿತರು,ವಿಶೇಷವಾಗಿ ಮಹಿಳೆಯರಿಗಾಗಿ ಮಲಾನಿಯವರ ದೀರ್ಘಕಾಲಿಕ ಬದ್ಧತೆಯನ್ನು ಆಯ್ಕೆ ಸಮಿತಿಯು ಪ್ರಶಂಸಿಸಿದೆ.

ಸ್ಪೇನ್‌ನ ಆರ್ಟ್ ಮ್ಯೂಸಿಯಂ ಫಂಡಾಸಿಯೊ ಜೋನ್ ಮಿರೋ ಮತ್ತು ಬ್ಯಾಂಕ್ ಲಾ ಕಾಯಿಷಾ ಜಂಟಿಯಾಗಿ ಈ ಪ್ರಶಸ್ತಿಯನ್ನು ನೀಡುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News