ಮಂಗಳೂರು: ಇಬ್ಬರು ಮಕ್ಕಳು ಸಹಿತ ತಾಯಿ ನಾಪತ್ತೆ

Update: 2019-05-24 17:19 GMT

 ಮಂಗಳೂರು, ಮೇ 24: ನಗರದ ಉರ್ವಸ್ಟೋರ್‌ನ ಅಶೋಕನಗರದ ಸೈಂಟ್ ಡೊಮಿನಿಕ್ ಚರ್ಚ್ ಬಳಿ ಆರಾಧನಾ ಅಪಾರ್ಟ್‌ಮೆಂಟ್‌ನ ಸೆಕ್ಯುರಿಟಿ ಕೊಠಡಿಯಲ್ಲಿ ವಾಸಿಸುತ್ತಿದ್ದ ಕೀರಪ್ಪ ಅವರ ಪತ್ನಿ ರೇಣುಕಾ (24) ಮತ್ತು ಮಕ್ಕಳಾದ ಮೇಘನಾ (5), ಮನೋಜ್ (4) ಅವರು ಮೇ 21 ರಿಂದ ನಾಪತ್ತೆಯಾಗಿದ್ದಾರೆ.

ಮೇ 21ರಂದು ಸಂಜೆ 5 ಗಂಟೆಗೆ ಉರ್ವ ಮಾರಿಯಮ್ಮ ದೇವಸ್ಥಾನಕ್ಕೆ ಹೋಗಿ ಬರುವುದಾಗಿ ಹೇಳಿ ರೇಣುಕಾ ಅವರು ಇಬ್ಬರು ಮಕ್ಕಳ ಜತೆ ಮನೆಯಿಂದ ಹೊರಟು ಹೋದವರು ಹಿಂದಿರುಗಿ ಬಾರದೆ ಕಾಣೆಯಾಗಿದ್ದಾರೆ. ಈ ಬಗ್ಗೆ ವಿವಿಧೆಡೆ ಹುಡುಕಾಡಿ ಎಲ್ಲಿಯೂ ಪತ್ತೆಯಾಗದ ಕಾರಣ ಮೇ 24 ರಂದು ಕೀರಪ್ಪ ಅವರು ಉರ್ವ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿದ್ದಾರೆ.

ಚಹರೆ: ರೇಣುಕಾ ಅವರು 5 ಅಡಿ 2 ಇಂಚು ಎತ್ತರ, ಕಪ್ಪು ಗುಂಗುರು ಕೂದಲು, ಗೋಧಿ ಮೈಬಣ್ಣ, ಉದ್ದ ಮುಖ, ಸಾಧಾರಣ ಮೈಕಟ್ಟು ಹೊಂದಿದ್ದು, ಕೆಂಪು ಸೀರೆ ಧರಿಸಿದ್ದಾರೆ. ಕನ್ನಡ ಭಾಷೆ ಮಾತನಾಡುತ್ತಾರೆ.

ಪುತ್ರಿ ಮೇಘನಾ 2 ಅಡಿ ಎತ್ತರ, ಗುಂಗುರು ಕೂದಲು, ಗೋಧಿ ಮೈಬಣ್ಣ, ಉದ್ದ ಮುಖ, ಸಾಧಾರಣ ಮೈಕಟ್ಟು ಹೊಂದಿದ್ದಾಳೆ. ಪ್ಯಾಂಟ್ ಮತ್ತು ಶರ್ಟ್ ಧರಿಸಿದ್ದು, ಕನ್ನಡ ಮಾತನಾಡುತ್ತಾಳೆೆ. ಪುತ್ರ ಮನೋಜ್ 1 ಅಡಿ 6 ಇಂಚು ಎತ್ತರ, ಗುಂಗುರು ಕೂದಲು, ಗೋಧಿ ಮೈಬಣ್ಣ, ಉರುಟು ಮುಖ, ಸಾಧಾರಣ ಶರೀರ ಹೊಂದಿದ್ದು, ಪ್ಯಾಂಟ್ ಶರ್ಟ್ ಧರಿಸಿರುತ್ತಾನೆ. ಕನ್ನಡ ಭಾಷೆ ಮಾತನಾಡುತ್ತಾನೆ.

ಇವರ ಪತ್ತೆಯಾದಲ್ಲಿ ಉರ್ವ ಠಾಣಾ (0824- 2220521, 9480802323) ಪೊಲೀಸರಿಗೆ ಮಾಹಿತಿ ನೀಡಲು ಕೋರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News