ವೈಎಸ್‌ಆರ್ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನಾಗಿ ಜಗನ್ ಮೋಹನ್ ರೆಡ್ಡಿ ಆಯ್ಕೆ

Update: 2019-05-25 09:00 GMT

ಅಮರಾವತಿ, ಮೇ 25: ಆಂಧ್ರಪ್ರದೇಶದ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ನೂತನ ಶಾಸಕರು ಶನಿವಾರ ಪಕ್ಷದ ಅಧ್ಯಕ್ಷ ವೈಎಸ್ ಜಗನ್ ಮೋಹನ್ ರೆಡ್ಡಿ ಅವರನ್ನು ಶಾಸಕಾಂಗ ಪಕ್ಷದ ನಾಯಕನಾಗಿ ಅವಿರೋಧವಾಗಿ ಆಯ್ಕೆ ಮಾಡಿದ್ದು, ಈ ಮೂಲಕ ನೂತನ ಮುಖ್ಯಮಂತ್ರಿ ಪ್ರಮಾಣವಚನಕ್ಕೆ ವೇದಿಕೆ ಸಿದ್ದವಾಗಿದೆ.

ರೆಡ್ಡಿ ಸಹಿತ ಎಲ್ಲ 151 ಶಾಸಕರು ರಾಜ್ಯ ರಾಜಧಾನಿ ಅಮರಾವತಿಯ ತಡೆಪಲ್ಲಿಯಲ್ಲಿರುವ ಮನೆಯಲ್ಲಿ ಸಭೆ ನಡೆಸ್ದಿರು.

 ಹಿರಿಯ ನಾಯಕ ಬಿ.ಸತ್ಯನಾರಾಯಣ ವೈಎಸ್‌ಆರ್‌ಸಿಪಿ ಶಾಸಕಾಂಗ ಪಕ್ಷದ ನಾಯಕನಾಗಿ ಜಗನ್ ರೆಡ್ಡಿ ಹೆಸರನ್ನು ಪ್ರಸ್ತಾವಿಸಿದರು. ಧರ್ಮನ ಪ್ರಸಾದ್ ರಾವ್ ಹಾಗೂ ಇತರ ಉನ್ನತ ನಾಯಕರು ರೆಡ್ಡಿ ಹೆಸರನ್ನು ಅನುಮೋದಿಸಿದರು.

ತನ್ನ ತಂದೆ ಹಾಗೂ ಮಾಜಿ ಮುಖ್ಯಮಂತ್ರಿ ವೈಎಸ್ ರಾಜಶೇಖರ ರೆಡ್ಡಿ ಅವರ ಭಾವಚಿತ್ರಕ್ಕೆ ಹಾರ ಹಾಕುವ ಮೂಲಕ ಜಗನ್ ಪಕ್ಷದ ಸಭೆ ಆರಂಭಿಸಿದರು. ನೂತನವಾಗಿ ನೇಮಕಗೊಂಡಿರುವ ಶಾಸಕರು ರೆಡ್ಡಿ ಅವರನ್ನು ಸ್ವಾಗತಿಸಿದರು.

ವೈಎಸ್‌ಆರ್ ಕಾಂಗ್ರೆಸ್ 175 ಸದಸ್ಯರನ್ನು ಒಳಗೊಂಡ ಆಂಧ್ರಪ್ರದೇಶ ವಿಧಾನಸಭೆಯಲ್ಲಿ 151 ಸೀಟುಗಳನ್ನು ಗೆದ್ದುಕೊಂಡಿದ್ದಲ್ಲದೆ 25 ಲೋಕಸಭಾ ಕ್ಷೇತ್ರಗಳ ಪೈಕಿ 22ರಲ್ಲಿ ಜಯ ಸಾಧಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News