ವಿಕಾಸ್ ಕಾಲೇಜಿನಲ್ಲಿ ಪದವಿಪೂರ್ವ ವಿದ್ಯಾರ್ಥಿಗಳಿಗೆ ಪುನರ್ಮನನ ಕಾರ್ಯಕ್ರಮ

Update: 2019-05-25 15:08 GMT

ಮಂಗಳೂರು: ನಗರದ ವಿಕಾಸ್ ಪದವಿಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಹಾಗೂ ಹೆತ್ತವರಿಗೆ ಪುನರ್ಮನನ ಶಿಬಿರವನ್ನು ನಗರದ ವಿಕಾಸ್ ಕಾಲೇಜಿನಲ್ಲಿ ಆಯೋಜಿಸಲಾಯಿತು.

ಮಂಗಳೂರಿನ ಕ್ಷೇಮ ವೈದ್ಯಕೀಯ ಮಹಾವಿದ್ಯಾಲಯದ ಶಸ್ತ್ರಚಿಕಿತ್ಸಾ ವಿಭಾಗದ ಪ್ರೊ. ಡಾ. ಸಿ ರಾಜೇಶ್ ಬಲ್ಲಾಳ್ ಮುಖ್ಯ ಅತಿಥಿಯಾಗಿ ಆಗಮಿಸಿ, “ ವಿದ್ಯಾರ್ಥಿ ಜೀವನದಲ್ಲಿ ಯಶಸ್ಸಿಗೆ ಅತಿ ಸಮೀಪದ ದಾರಿ ಯಾವುದೂ ಇಲ್ಲ. ಕೇವಲ ಕಠಿಣ ಪರಿಶ್ರಮದಿಂದ ಮಾತ್ರ ಯಶಸ್ಸು ಸಿಗುತ್ತದೆ. ಈ   ಕಠಿಣ ಪರಿಶ್ರಮವು ನಿಮ್ಮ ಮುಂದಿನ ಎರಡು ವರ್ಷಗಳ ಅವಧಿ ಮುಗಿಯುವವರೆಗೂ ಮುಂದುವರಿಯುತ್ತಿರಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯು ತನ್ನ ಜೀವನದಲ್ಲಿ ಕನಸುಗಳನ್ನು ಕಾಣುತ್ತಿರಬೇಕು. ಮತ್ತು ಅವುಗಳನ್ನು ನನಸಾಗಿಸಲು ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿರಬೇಕು” ಎಂದರು.

ಗೌರವ ಅತಿಥಿಗಳಾಗಿ ಆಗಮಿಸಿದ ಆವಂತಿ ಲರ್ನಿಂಗ್ ಸೆಂಟರ್ ಸಹಸಂಸ್ಥಾಪಕರು ಹಾಗೂ ಸಿಇಒ ಶ್ರೀ ಕೃಷ್ಣ ರಾಮ್ ಕುಮಾರ್ ಅವರು ಮಾತನಾಡುತ್ತ “ ವಿದ್ಯಾರ್ಥಿಗಳು ಸ್ವಪ್ರೇರಣಾದಾಯಕರಾಗಿರಬೇಕು. ವಿದ್ಯಾರ್ಥಿ ಜೀವನದಲ್ಲಿ ಕಠಿಣ ಪರಿಶ್ರಮದ ಜೊತೆಗೆ ತಮ್ಮ ಕುಟುಂಬ ಮತ್ತು ಗೆಳೆಯರೊಂದಿಗೆ ಬೆರೆತು, ಹವ್ಯಾಸಗಳು ಹಾಗೂ ಸಮರ್ಪಕ ವಿಶ್ರಾಂತಿಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಾಧನೆ ಮಾಡಬೇಕು ”ಎಂದರು.

ವೇದಿಕೆಯಲ್ಲಿ ಮಾಜಿ ಸಚಿವರು ಹಾಗೂ ಕಾಲೇಜಿನ ಮುಖ್ಯಸ್ಥರೂ ಆಗಿರುವ ಜೆ.ಕೃಷ್ಣ ಪಾಲೆಮಾರ್, ಅಧ್ಯಕ್ಷ ಸ್ಥಾನವನ್ನು ವಹಿಸಿ ಮಾತನಾಡುತ್ತ, “ನಮ್ಮ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯ, ಸ್ಪರ್ಧಾತ್ಮಕ ಪರೀಕ್ಷೆಗಳ ಕೋಚಿಂಗ್  ಜೊತೆಗಿನ  ಗುಣಮಟ್ಟದ ವಿದ್ಯಾಭ್ಯಾಸವನ್ನು ನೀಡಲಾಗುತ್ತಿದೆ. ವಿದ್ಯಾರ್ಥಿಗಳ ಶಿಸ್ತು ಹಾಗೂ ಆರೋಗ್ಯದ ಬಗ್ಗೆ ನಾವು ವಿಶೇಷ ಕಾಳಜಿಯನ್ನು ವಹಿಸುತ್ತಿದ್ದೇವೆ ”ಎಂದರು.

ವಿಕಾಸ್‍ ಎಜ್ಯುಕೇಶನ್  ಟ್ರಸ್ಟಿ  ಜೆ.ಕೊರಗಪ್ಪ,  ಸೂರಜ್‍ ಕುಮಾರ್ ಕಲ್ಯ, ವಿಕಾಸ್ ಸಮೂಹ ಸಂಸ್ಥೆಯ ಸಮನ್ವಯಾಧಿಕಾರಿ ಪಾರ್ಥಸಾರಥಿ ಪಾಲೆಮಾರ್, ವಿಕಾಸ ಸಮೂಹ ಶಿಕ್ಷಣ ಸಂಸ್ಥೆಗಳ ಡೀನ್ ಡಾ. ಮಂಜುಳಾ ರಾವ್ ಉಪಸ್ಥಿತರಿದ್ದರು.

ವಿಕಾಸ್ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಹಾಗೂ ವಿಕಾಸ್ ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ಸಮನ್ವಯಾಧಿಕಾರಿ  ಶ್ರೀಮತಿ ಐಶ್ವರ್ಯರಾವ್ ಸ್ವಾಗತಿಸಿದರು. ವಿಕಾಸ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ.ಸುನೀಲ್ ಬಿ ಎಮ್ ಕಾಲೇಜಿನ ನೀತಿ ನಿಯಮಾವಳಿಗಳ ಬಗ್ಗೆ ಮಾಹಿತಿಯನ್ನು ನೀಡಿದರು. ವಿಕಾಸ್ ಪದವಿಪೂರ್ವ ಕಾಲೇಜಿನ ಶೈಕ್ಷಣಿಕ  ನಿರ್ದೇಶಕರಾದ ಪ್ರೊ. ಟಿ. ರಾಜಾರಾಮ್ ರಾವ್ ಶೈಕ್ಷಣಿಕ ಮಾಹಿತಿಯನ್ನು ನೀಡಿದರು. ವಿಕಾಸ್‍ಎಜ್ಯು ಸೊಲ್ಯುಶನ್ ಸಲಹೆಗಾರರಾದ ಡಾ.ಅನಂತ್ ಪ್ರಭು ಜಿ ಮಾತನಾಡಿದರು.

ಉಪನ್ಯಾಸಕಿ ಶ್ರುತಿ ಭಂಡಾರಿ ವಂದಿಸಿದರು, ದೀಪಿಕಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ 2019ರ ಶೈಕ್ಷಣಿಕ ವರ್ಷದಲ್ಲಿ ವಿಜ್ಞಾನ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ  ಪೃಥ್ವಿ ಹಾಗೂ ವರ್ಷಾ ನಾಯಕ್ ಮತ್ತು ವಾಣಿಜ್ಯ ವಿಭಾಗದ  ಶ್ರೇಷ್ಠ ಹಾಗೂ ಸಮೀಕ್ಷಾ ಇವರನ್ನು ಸನ್ಮಾನಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News