ನೀರಿನ ಸಮಸ್ಯೆ: ಅಬ್ಬಿಗುಡ್ಡೆಗೆ ಸಿಪಿಎಂ ನಿಯೋಗ ಭೇಟಿ

Update: 2019-05-25 15:44 GMT

ಬೈಂದೂರು, ಮೇ 25: ತೀವ್ರತರದ ನೀರಿನ ಸಮಸ್ಯೆ ಎದುರಿಸುತ್ತಿರುವ ಗುಲ್ವಾಡಿಯ ಅಬ್ಬಿಗುಡ್ಡೆ ಗ್ರಾಮದ ಕೆಲವು ಮನೆಗಳಿಗೆ ಸಿಪಿಐ(ಎಂ) ನಿಯೋಗವು ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿತು.

2018ರಲ್ಲಿ ಸಿಪಿಐಎಂ ಬೈಂದೂರು ವಲಯ ಸಮಿತಿ ನೇತೃತ್ವದಲ್ಲಿ ಕುಡಿ ಯುವ ನೀರಿಗೆ ಶಾಶ್ವತ ಪರಿಹಾರಕ್ಕಾಗಿ ಗ್ರಾಪಂ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಗಿತ್ತು. ಆ ವೇಳೆಯಲ್ಲಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದರೂ ಈವರೆಗೆ ಕಾಳಜಿ ವಹಿಸದಿರುವುದು ಖಂಡನೀಯ ಎಂದು ನಿಯೋಗ ತಿಳಿಸಿದೆ.

 ಸ್ಥಳೀಯ ಗ್ರಾಪಂನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಬೆಂಬಲಿತರು ಆಡಳಿತ ಮಾಡುತ್ತಿದ್ದು ಈ ಪಕ್ಷಗಳೇ ತಾಪಂ, ಜಿಪಂಗಳಲ್ಲಿ ಅಧಿಕಾರ ನಡೆಸುತ್ತಿದೆ. ಆದರೂ ಗ್ರಾಮದ ಜನರು ಮಾತ್ರ ಅನುದಾನದ ಕೊರತೆಯಿಂದ ಕುಡಿಯುವ ನೀರಿಗೂ ಪರದಾಡುವಂತಾಗಿರುವುದು ಖಂಡನೀಯ ಎಂದು ಸಿಪಿಐ(ಎಂ) ಟೀಕಿಸಿದೆ.

ಶೀಘ್ರವೇ ಅನುದಾನ ಒದಗಿಸಿ ಅರ್ಧಕ್ಕೆ ನಿಂತ ಕುಡಿಯುವ ನೀರಿನ ಸರಬ ರಾಜು ಕಾಮಗಾರಿಯನ್ನು ಕೂಡಲೇ ಆರಂಭಿಸಬೇಕು. ಈ ಮೂಲಕ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಪಕ್ಷ ಒತ್ತಾಯಿಸಿದೆ. ನಿಯೋಗದಲ್ಲಿ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಬೈಂದೂರು ವಲಯ ಕಾರ್ಯದರ್ಶಿ ಸುರೇಶ್ ಕಲ್ಲಾಗರ, ಸ್ಥಳೀಯ ಶಾಖಾ ಕಾರ್ಯದರ್ಶಿ ಅಣ್ಣಪ್ಪ ಅಬ್ಬಿಗುಡ್ಡೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News