ಮಲ್ಪೆ ರಾಜ್ ಫಿಶ್‌ಮಿಲ್‌ನಿಂದ ಉದ್ಯೋಗಿ ವಜಾ: ದೂರು

Update: 2019-05-25 15:46 GMT

 ಮಲ್ಪೆ, ಮೇ 25: ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾಲಕತ್ವದ ಮಲ್ಪೆ ರಾಜ್ ಫಿಶ್‌ಮಿಲ್‌ನ ಉದ್ಯೋಗಿಯೊಬ್ಬರನ್ನು ಕೆಲಸದಿಂದ ವಜಾ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿರುವ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ ಫಿಶ್‌ಮಿಲ್‌ನ ಉದ್ಯೋಗಿ ಮಲ್ಪೆ ಮಧ್ವನಗರ ಕಂಬಳಕಟ್ಟ ನಿವಾಸಿ ರಮೇಶ್ ಎ.24ರಂದು ಸಂಸ್ಥೆಯಲ್ಲಿ ಸಿಗುವ ಸಾಲಕ್ಕಾಗಿ ಅರ್ಜಿ ಸಲ್ಲಿಸಿದ್ದು ಅರ್ಜಿಯನ್ನು ಮ್ಯಾನೇಜರ್ ಸೊಲೋಮನ್ ಲೂಯಿಸ್ ತಿರಸ್ಕರಿಸಿ ಕೆಲಸ ದಿಂ ವಜಾ ಮಾಡುವುದಾಗಿ ಹೇಳಿದ್ದರು.

ಮೇ 22ರಂದು ಸೊಲೋಮನ್ ಲೂಯಿಸ್, ಸಂಸ್ಥೆಯ ಇನ್ನೋರ್ವ ಮ್ಯಾನೇಜರ್ ಸಂತೋಷ ಸಾಲ್ಯಾನ್ ಹಾಗೂ ಸ್ವಾಗತಗಾರ ಸಂತೋಷ ಪೂಜಾರಿ ಕುಮ್ಮಕ್ಕಿನಿಂದ ರಮೇಶ್ರನ್ನು ಮಲ್ಪೆಯ ರಾಜ್ ಫಿಶ್‌ಮಿಲ್ ಕಚೇರಿಗೆ ಕರೆದು ಕೆಲಸದಿಂದ ಅಮಾನತುಗೊಳಿಸಿ ಕಾರಣ ಕೇಳಿ ನೋಟಿಸನ್ನು ನೀಡಿ ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ತಿಳಿಸ ಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News