ಮಣಿಪಾಲ: ಜಠರ ಕರುಳಿನ ಶರೀರ ವಿಜ್ಞಾನ ಪ್ರಯೋಗಾಲಯ ಉದ್ಘಾಟನೆ

Update: 2019-05-25 15:50 GMT

ಉಡುಪಿ, ಮೇ 25: ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಜಠರಕರುಳಿನ ಶರೀರ ವಿಜ್ಞಾನ ಪ್ರಯೋಗಾಲಯ ಹಾಗೂ ಚಲನ ವಿಜ್ಞಾನ ಚಿಕಿತ್ಸಾಲುವನ್ನು ಶನಿವಾರ ಉದ್ಘಾಟಿಸಲಾಯಿತು.

ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ) ಸಹ ಉಪಕುಲಪತಿ ಡಾ. ಪೂರ್ಣಿಮಾ ಬಾಳಿಗಾ ಅವರು ಜಠರ ಕರುಳಿನ ಶರೀರ ವಿಜ್ಞಾನ ಪ್ರಯೋಗಾಲಯ ಮತ್ತು ಚಲನ ವಿಜ್ಞಾನ ಚಿಕಿತ್ಸಾಲಯವನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಡಾ.ಪೂರ್ಣಿಮಾ ಬಾಳಿಗಾ, ಕೆಎಸಿ ಮಣಿಪಾಲ ಒಂದು ಟರ್ಷಿಯರಿ ಕೇರ್ ವೈದ್ಯಕೀಯ ಭೋಧನಾ ಆಸ್ಪತ್ರೆಯಾಗಿ ಅದರ ಸೇವೆಗಳಿಗೆ ಹೊಸ ವಿಶೇಷತೆ ಮತ್ತು ಉಪ ವಿಶೇಷತಾ ವಿಭಾಗಗಳನ್ನು ಸೇರಿಸುವ ಮೂಲಕ ರೋಗಿಗಳಿಗೆ ಗುಣಮಟ್ಟದ ಸೇವೆಯನ್ನು ನೀಡುತ್ತಿದೆ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮುಂಬೈ ಜಸ್ಲೋಕ್ ಆಸ್ಪತ್ರೆಯ ಗ್ಯಾಸ್ಟ್ರೊ ಎಂಟೆರಾಲಜಿಸ್ಟ್ ಡಾ.ರಾಜೇಶ್ ಸೈನಾನಿ ಮಾತನಾಡಿ, ವಿಶ್ವ ಜನಸಂಖ್ಯೆಯ ಶೇ.10-20ರಷ್ಟು ಮಂದಿ ವಿವಿಧ ಕರುಳಿನ ಕಾಯಿಲೆ ಗಳಿಂದ ಬಳಲುತ್ತಿದ್ದಾರೆ. ಜಠರಕರುಳಿನ ಶರೀರ ವಿಜ್ಞಾನ ಪ್ರಯೋಗಾಲಯ ಮತ್ತು ಚಲನವಿಜ್ಞಾನ ಕ್ಲಿನಿಕ್, ಜಠರ ಕರುಳಿನ ವ್ಯೆಹದಲ್ಲಿನ ಅಸಹಜ ಸ್ಥಿತಿಗಳನ್ನು ಮೌಲ್ಯಮಾಪನ ಮಾಡಲು ಮತ್ತು ರೋಗಪತ್ತ ಮಾಡಲು ವಿವಿಧ ಪರೀಕ್ಷೆಗಳನ್ನು ನಡೆಸುತ್ತದೆ ಎಂದರು.

ಮಣಿಪಾಲ ಕೆಎಂಸಿ ಡೀನ್ ಡಾ.ಪ್ರಜ್ಞಾ ರಾವ್, ಮಣಿಪಾಲ ಸಮೂಹದ ಮುಖ್ಯ ನಿರ್ವಹಣಾ ಅಧಿಕಾರಿ ಸಿ.ಜಿ.ಮುತ್ತಣ್ಣ, ಮಣಿಪಾಲ ಕೆಎಂಸಿಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ ಶೆಟ್ಟಿ, ಆಸ್ಪತ್ರೆಯ ಗ್ಯಾಸ್ಟ್ರೊಎಂಟೆರಾಲಜಿ ಮತ್ತು ಹೆಪಟಾಲಜಿ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ ಡಾ.ಶಿರನ್ ಶೆಟ್ಟಿ ಉಪಸ್ಥಿತರಿದ್ದರು.

ಕೆಎಂಸಿ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರು. ಪ್ರಾಸ್ತಾವಿಕ ಮಾತುಗಳನಾ್ನಡಿದ ಡಾ. ಶಿರನ್ ಶೆಟ್ಟಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News