ವಿದ್ಯೋದಯ ಪದವಿ ಪೂರ್ವ ಕಾಲೇಜಿನ ಸಿಇಟಿ ರ್ಯಾಂಕ್

Update: 2019-05-25 15:56 GMT

ಉಡುಪಿ, ಮೇ 25: ಉಡುಪಿಯ ವಿದ್ಯೋದಯ ಟ್ರಸ್ಟ್‌ನ ಅಂಗಸಂಸ್ಥೆ ವಿದ್ಯೋದಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಇಂದು ಪ್ರಕಟಗೊಂಡ 2019ನೇ ಸಾಲಿನ ಸಿಇಟಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ್ದಾರೆ.

ಕಾಲೇಜಿನ ಅಭಿಷೇಕ್ ಎನ್.ಆಚಾರ್ಯ ಇಂಜಿನಿಯರಿಂಗ್‌ನಲ್ಲಿ 1048ನೇ ರ್ಯಾಂಕ್ ಪಡೆದಿದ್ದರೆ, ಭಾರತೀಯ ವೈದ್ಯಪದ್ಧತಿಯಲ್ಲಿ 767, ಕೃಷಿ ಬಿಎಸ್ಸಿಯಲ್ಲಿ 286ನೇ ರ್ಯಾಂಕ್ ಪಡೆದಿದ್ದಾರೆ.

ಇನ್ನುಳಿದಂತೆ ನಮನ್‌ಕುಮಾರ್ ಶೆಟ್ಟಿ ಇಂಜಿನಿಯರಿಂಗ್‌ನಲ್ಲಿ 1156ನೇ ರ್ಯಾಂಕ್, ಸುಮಯ್ಯ ಶಹೀದ್ ಮಸೂದ್ ಇಂಜಿನಿಯರಿಂಗ್‌ನಲ್ಲಿ 1543, ಭಾರತೀಯ ವೈದ್ಯಪದ್ಧತಿಯಲ್ಲಿ 966, ಕೃಷಿ ಬಿಎಸ್ಸಿಯಲ್ಲಿ 528ನೇ ರ್ಯಾಂಕ್ ಪಡೆದಿದ್ದಾರೆ.

ವಿಲ್ಸನ್ ಫುರ್ಟಾಡೊ ಇಂಜಿನಿಯರಿಂಗ್‌ನಲ್ಲಿ 1813ನೇ ರ್ಯಾಂಕ್ ಪಡೆದಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಎ.ಎಲ್.ಛಾತ್ರ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News