​ಮೇ 26ರಿಂದ ‘ಬಾಹ್ಯಾಕಾಶಯಾನದ ಉದಯ’ ಪ್ರದರ್ಶನ

Update: 2019-05-25 16:06 GMT

ಮಂಗಳೂರು, ಮೇ 25: ಪಿಲಿಕುಳದ ಸ್ವಾಮಿ ವಿವೇಕಾನಂದ ತಾರಾಲಯದಲ್ಲಿ ‘ಬಾಹ್ಯಾಕಾಶಯಾನದ ಉದಯ’ ಎಂಬ ಖಗೋಳಶಾಸ್ತ್ರಕ್ಕೆ ಸಂಬಂಧಿಸಿದ ಹೊಸ 3ಡಿ ಚಲನಚಿತ್ರವನ್ನು ಮೇ 26ರಿಂದ ಪ್ರದರ್ಶಿಸಲಾಗುವುದು.

ಈ ಪ್ರದರ್ಶನವು ಚಂದ್ರನತ್ತ ಉಡಾವಣೆಗೊಂಡ ಪ್ರಥಮ ಬಾಹ್ಯಾಕಾಶ ಕೃತಕ ಉಪಗ್ರಹ ಸ್ಪುಟ್ನಿಕ್‌ನಿಂದ ಹಿಡಿದು ಇತ್ತೀಚಿನವರೆಗೆ ಮಾನವ ನಡೆಸಿದ ಬಾಹ್ಯಾಕಾಶ ಅನ್ವೇಷಣೆ ಕುರಿತ 4ಕೆ- 3ಡಿ ಪ್ರದರ್ಶನವಾಗಿದೆ. ವಾರದ ಮಂಗಳವಾರ, ಗುರುವಾರ, ಶನಿವಾರ ಮತ್ತು ರವಿವಾರ ದಿನಗಳಲ್ಲಿ ಆಂಗ್ಲ ಮತ್ತು ಕನ್ನಡ ಭಾಷೆಗಳಲ್ಲಿ ಮೂರು ಪ್ರದರ್ಶನಗಳಿರುತ್ತವೆ.

ಉಳಿದ ದಿನಗಳಲ್ಲಿ ‘ಕಾಣದ ಜಗತ್ತಿನ ರಹಸ್ಯಗಳು’ ಎಂಬ 3ಡಿ ಚಲನಚಿತ್ರ ಪ್ರದರ್ಶನ ನಡೆಯಲಿದೆ. ಸಂದರ್ಶಕರು ಜಾಲತಾಣದಲ್ಲಿ ಮುಂಗಡವಾಗಿ ಟಿಕೆಟ್‌ಗಳನ್ನು ಕಾಯ್ದಿರಿಸಬಹುದಾಗಿದೆ. 

ಈ ಪ್ರದರ್ಶನಗಳು ಸಾರ್ವಜನಿಕರಿಗೆ, ಮುಖ್ಯವಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಪೂರಕವಾಗಿದ್ದು, ಇದರ ಸದುಪಯೋಗವನ್ನು ಸಂದರ್ಶಕರು ಪಡೆದುಕೊಳ್ಳಬೇಕು ಎಂದು ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News