ಕೆಎಸ್ಸಾರ್ಟಿಸಿ ಬಸ್ ಢಿಕ್ಕಿ: ಬುಲೆಟ್ ಸವಾರನಿಗೆ ಗಾಯ
Update: 2019-05-25 21:59 IST
ಬಂಟ್ವಾಳ, ಮೇ 25: ಬುಲೆಟ್ ಬೈಕ್ ಹಾಗೂ ಕೆಎಸ್ಸಾರ್ಟಿಸಿ ಬಸ್‍ನ ನಡುವೆ ಢಿಕ್ಕಿಯಾಗಿ ಬೈಕ್ ಸವಾರ ಗಾಯಗೊಂಡ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಾಣಿ ಸಮೀಪದ ಬುಡೋಳಿ ಎಂಬಲ್ಲಿ ನಡೆದಿದೆ.
ಕಡಬ ತಾಲೂಕಿನ ನೆಟ್ಟಣ ನಿವಾಸಿ ಸಂಜಿತ್ ಸದಾನಂದನ್ ಗಾಯಗೊಂಡವರು. ಮಂಗಳೂರು ಕಡೆಯಿಂದ ಕಡಬ ಕಡೆಗೆ ತೆರಳುತಿದ್ದ ಬೈಕ್‍ಗೆ ವಿರುದ್ಧ ದಿಕ್ಕಿನಿಂದ ಬಂದ ಸರಕಾರಿ ಬಸ್ ಬೊಳ್ಳುಕಲ್ಲು ಎಂಬಲ್ಲಿ ಢಿಕ್ಕಿಯಾಗಿ ಅಪಘಾತ ಸಂಭವಿಸಿದೆ.