ಸಮುದಾಯ ಭವನ ಆತ್ಮ ವಿಶ್ವಾಸದ ಸಂಕೇತ: ರಘುಪತಿ ಭಟ್

Update: 2019-05-26 14:25 GMT

ಉಡುಪಿ, ಮೇ 26: ಸಮುದಾಯ ಭವನಗಳು ಆಯಾ ಸಮಾಜದ ಆತ್ಮ ವಿಶ್ವಾಸದ ಸಂಕೇತವಲ್ಲದೆ ಅಭಿಮಾನ ಮತ್ತು ಆತ್ಮವಿಶ್ವಾಸದ ಪ್ರತೀಕವಾಗಿದೆ ಎಂದು ಉಡುಪಿ ಶಾಸಕ ಕೆ.ರಘುಪತಿ ಭಟ್ ಹೇಳಿದ್ದಾರೆ.

ಉಡುಪಿ ಜಿಲ್ಲಾ ಮರಾಟಿ ಸಮಾಜ ಸೇವಾ ಸಂಘದ ವತಿಯಿಂದ ಕುಂಜಿ ಬೆಟ್ಟುವಿನಲ್ಲಿ ನೂತನವಾಗಿ ನಿರ್ಮಿಸಲಾದ ಮರಾಟಿ ಸಮುದಾಯ ಭವನ ಹಾಗೂ ಶ್ರೀತುಳಜಾ ಭವಾನಿ ಮಂದಿರವನ್ನು ರವಿವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಮರಾಟಿ ಸಮಾಜ ಆರ್ಥಿಕವಾಗಿ ಹಿಂದುಳಿದಿದ್ದರೂ ಶೈಕ್ಷಣಿಕವಾಗಿ ಸಾಕಷ್ಟು ಮುಂದುವರೆದಿದೆ. ಐಎಎಸ್ ಅಧಿಕಾರಿ ಸೇರಿದಂತೆ ಸರಕಾರದ ಉನ್ನತ ಹುದ್ದೆ ಯಲ್ಲಿ ಮರಾಟಿ ಸಮುದಾಯದವರಿದ್ದಾರೆ. ಇವರೆಲ್ಲಾ ಸಮುದಾಯದ ಮುಂದಿನ ಪೀಳಿಗೆಗೆ ಮಾದರಿಯಾಗಿದ್ದಾರೆ ಎಂದರು.

ಮಾರಾಟಿ ಸಮುದಾಯ ವಿಶಿಷ್ಟ ಸಂಸ್ಕೃತಿ, ಧಾರ್ಮಿಕ ಚೌಕಟ್ಟುಗಳನ್ನು ಒಳ ಗೊಂಡಿದ್ದು, ಇಲ್ಲಿವರೆಗೂ ಯಾವುದಕ್ಕೂ ಧಕ್ಕೆ ಬಾರದಂತೆ ತನ್ನ ಸಂಸ್ಕೃತಿಯನ್ನು ಕಾಪಾಡಿಕೊಂಡು ಬಂದಿದೆ. ಮುಂದಿನ ದಿನಗಳಲ್ಲಿ ಸರಕಾರದಿಂದ ಸಿಗುವ ಸವಲತ್ತುಗಳು ಮರಾಟಿ ಸಮಾಜಕ್ಕೆ ದೊರೆಯುವಂತೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಅವರು ಭರವಸೆ ನೀಡಿದರು.

 ದೆಹಲಿಯ ಜಿಎಸ್‌ಟಿ ಆಯುಕ್ತ ರಾಜೇಶ್ ಪ್ರಸಾದ್, ಕರ್ನಾಟಕ-ಕೇರಳ ಮರಾಟಿ ಫೆಡರೇಶನ್ ಅಧ್ಯಕ್ಷ ಟಿ.ಸುಬ್ರಾಯ ನಾಯ್ಕ, ಜಿಲ್ಲಾ ಮಾರಾಟಿ ಸೇವಾ ಸಮಾಜದ ಸ್ಥಾಪಕ ಅಧ್ಯಕ್ಷ ಕೆ.ಅಣ್ಣಯ್ಯ ನಾಯ್ಕ ಕೊಡಂಗಳ, ಸಮಾಜದ ಪ್ರಮುಖರಾದ ಡಾ.ಕೆ.ಸುಂದರ ನಾಯ್ಕ, ಕೆ.ಕೆ.ನಾಯ್ಕ, ಷಣ್ಮುಖ ನಾಯ್ಕ, ದೇವೆಂದ್ರ ನಾಯ್ಕ, ಎ.ನರಸಿಂಹ ನಾಯ್ಕ, ಕೆ.ಶ್ರೀನಿವಾಸ ನಾಯ್ಕ ಮೊದಲಾದ ವರು ಉಪಸ್ಥಿತರಿದ್ದರು.

ಅಧ್ಯಕ್ಷತೆಯನ್ನು ಜಿಲ್ಲಾ ಮರಾಟಿ ಸೇವಾ ಸಮಾಜದ ಅಧ್ಯಕ್ಷ ಎಸ್.ಅನಂತ ನಾಯ್ಕ ವಹಿಸಿದ್ದರು. ಕೆ.ಟಿ.ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿ. ಮಂಜುನಾಥ ನಾಯ್ಕ ಹಾಗೂ ರಕ್ಷಿತ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News