ಉಡುಪಿ ಜಿಲ್ಲಾ ಚೆಸ್ ಪಂದ್ಯಕೂಟ: ಶರಣ್ ರಾವ್ ಚಾಂಪಿಯನ್

Update: 2019-05-26 14:25 GMT

 ಮಣಿಪಾಲ, ಮೇ 26: ಉಡುಪಿ ಜಿಲ್ಲಾ ಚೆಸ್ ಅಸೋಸಿಯೇಶನ್ ಮತ್ತು ಮಣಿಪಾಲ ಲಯನ್ಸ್ ಕ್ಲಬ್ನ ಜಂಟಿ ಆಶ್ರಯದಲ್ಲಿ 15ನೆ ಲಯನ್ಸ್ ಕಲ್ಯಾ ದೇವರಾಯ ಸ್ಮರಣಾರ್ಥ ಮಣಿಪಾಲದ ಡಾ. ಟಿಎಂಎ ಪೈ ಸಭಾಂಗಣದಲ್ಲಿ ಏರ್ಪಡಿಸಲಾದ ಅಂತರ ಜಿಲ್ಲಾ ಚೆಸ್ ಪಂದ್ಯಕೂಟದ ಮುಕ್ತ ವಿಭಾಗದಲ್ಲಿ ಮಂಗಳೂರಿನ ಶರಣ್ ರಾವ್ ಪ್ರಥಮ ಸ್ಥಾನವನ್ನು ಗಳಿಸಿ ಚಾಂಪಿಯನ್‌ಶಿಪ್ ಟೊ್ರೀಫಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

 ಶ್ರೀರಾಮ್ ಮತ್ತು ಲಕ್ಷಿತ್ ಬಿ.ಸಾಲಿಯಾನ್ ಅನುಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನವನ್ನು ಗಳಿಸಿದ್ದಾರೆ. ವಯೋಮಿತಿ 7ರ ವಿಭಾಗದಲ್ಲಿ ರಿತೇಶ್ ಕೆ., ಪ್ರಣೀತ್ ಕೆ.ನಾಯ್ಕ್, ರೀಮಾ ರಾವ್, 9ರ ವಿಭಾಗದಲ್ಲಿ ಅರುಶಿ ಸೆವೆರಿನ್, ಪ್ರಚೇತ್ ಪಿ., ಅನೀಶ್ ಎಸ್.ಸಿ., 11ರ ವಿಭಾಗದಲ್ಲಿ ಸಾತ್ವಿಕ್ ಎ.ಶೆಟ್ಟಿ, ಅಂಕಿತ್ ಕೆ.ಎಸ್., ಶಶಾಂಕ್ ಭಟ್ ಪಿ., 13ರ ವಿಭಾಗದಲ್ಲಿ ಸಮಿತ್ ಎ.ಸುವರ್ಣ, ದಯಾಕೃಷ್ಣ ಶೆಟ್ಟಿ, ನಿಖಿಲ್ ವಿಕ್ರಂ, 15ರ ವಿಭಾಗದಲ್ಲಿ ಗಗನ್ ಎಂ.ಎಸ್., ಶಿರಿಶ್ ಜಯಪ್ರಕಾಶ್, ಮೃದುಲಾ ಮಸ್ಕರೇನಸ್ ಪ್ರಥಮ ವುೂರು ಸ್ಥಾನಗಳನ್ನು ಗಳಿಸಿದರು.

ಅತ್ಯುತ್ತಮ ಹಿರಿಯ ಆಟಗಾರರಾಗಿ ರಾಮ ಶೇರಿಗಾರ್ ಮತ್ತು ಕೃಷ್ಣ ಮೂರ್ತಿ, ಕಿರಿಯ ಆಟಗಾರರಾಗಿ ಅಥರ್ವ ಪಿ.ಶೆಟ್ಟಿ ಮತ್ತು ಆರಾಧ್ಯ ಯು.ಡಿ. ಪ್ರಶಸ್ತಿಗಳನ್ನು ಗಳಿಸಿದರು. ಬಾಲಕಿಯರಿಗೆ ವಿಶೇಷವಾಗಿ ನೀಡಿದ ದಿ.ಮಾಯಾ ವಿಜೇಂದ್ರನಾಥ್ ಶೆಣೈ ಸ್ಮರಣಾರ್ಥ ಪ್ರಶಸ್ತಿಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಇಶಾ ಶರ್ಮ ಪಡೆದುಕೊಂಡರು.

  ಸಿಂಡಿಕೇಟ್ ಬ್ಯಾಂಕ್‌ನ ಮಹಾಪ್ರಬಂಧಕ ಭಾಸ್ಕರ್ ಹಂದೆ ಪ್ರಶಸ್ತಿಗಳನ್ನು ವಿತರಿಸಿದರು. ಪಂದ್ಯಕೂಟದಲ್ಲಿ 50 ಸಾವಿರ ರೂ.ಗಳ ನಗದು, 80ಟ್ರೋಫಿಗಳ ಸಹಿತ ಒಟ್ಟು 95 ಬಹುಮಾನಗಳನ್ನು ವಿತರಿಸಲಾಯಿತು. 180 ಸ್ಪರ್ಧಿಗಳು ಭಾಗವಹಿಸಿದ್ದರು.

ಮಂಜುನಾಥ್ ಉಪಾಧ್ಯ, ಮಟ್ಟಾರು ರಮೇಶ್ ಕಿಣಿ, ಉದ್ಯಮಿ ಬೋಳ ಶ್ರೀಪತಿ ಕಾಮತ್, ಉಡುಪಿಯ ಐಎಂಎ ಅಧ್ಯಕ್ಷ ಡಾ.ಗುರುಮೂರ್ತಿ ಭಟ್, ಡಾ.ಉಲ್ಲಾಸ್ ಕಾಮತ್, ಡಾ.ಸುರೇಶ ಶೆಣೈ ಉಪಸ್ಥಿತರಿದ್ದರು. ಜಿಲ್ಲಾ ಚೆಸ್ ಅಸೋಸಿಯೇಷನ್ನ ಅಧ್ಯಕ್ಷ ಡಾ.ರಾಜಗೋಪಾಲ್ ಶೆಣೈ ಪಂದ್ಯಕೂಟವನ್ನು ಸಂಯೋಜಿಸಿದರು. ಡಾ.ಗಣೇಶ್ ಪೈ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News