×
Ad

ಹಾವು ಕಡಿತ: ಎರಡೂವರೆ ವರ್ಷದ ಮಗು ಮೃತ್ಯು

Update: 2019-05-26 21:53 IST

ಅಜೆಕಾರು, ಮೇ 26: ನಾಗರಹಾವೊಂದು ಕಚ್ಚಿದ ಪರಿಣಾಮ ಎರಡೂವರೆ ವರ್ಷ ಪ್ರಾಯದ ಮಗು ಮೃತಪಟ್ಟ ಘಟನೆ ಶಿರ್ಲಾಲು ಗ್ರಾಮದ ಮುಡಾಯಿ ಗುಡ್ಡೆ ಎಂಬಲ್ಲಿ ಮೇ 25ರಂದು ಅಪರಾಹ್ನ ವೇಳೆ ನಡೆದಿದೆ.

ಮುಡಾಯಿಗುಡ್ಡೆ ಸರ್ಫರಾಜ್ ಮತ್ತು ಫಾತಿಮಾ ರಶೀದಾ ದಂಪತಿಯ ಎರಡೂವರೆ ವರ್ಷದ ಹೆಣ್ಣು ಮಗು ಖತೀಜತುಲ್ ಫರ್ಝಾನಾ ಮೃತ ಮಗು.

ಮಗು ಮನೆಯ ಬಳಿಯ ಕೊಟ್ಟಿಗೆಯಲ್ಲಿ ಆಟವಾಡುತ್ತಿದ್ದ ವೇಳೆ ನಾಗರ ಹಾವೊಂದು ಆಕೆಯ ಬಲಕೈಗೆ ಕಚ್ಚಿತ್ತೆನ್ನಲಾಗಿದೆ.
ಇದರಿಂದ ತೀವ್ರವಾಗಿ ಅಸ್ವಸ್ಥಗೊಂಡ ಮಗುವನ್ನು ಕೂಡಲೇ ಕಾರ್ಕಳ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಅಲ್ಲಿ ಪರೀಕ್ಷಿಸಿದ ವೈದ್ಯರು ಮಗು ಮೃತಪಟ್ಟಿರುವುದಾಗಿ ತಿಳಿಸಿದರು. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News