ವೈರಲ್ ಚಿತ್ರ: ಸಾರ್ವಜನಿಕರಿಗಾಗಿ ಇಫ್ತಾರ್ ಕೂಟ ಏರ್ಪಡಿಸಿ ನಮಾಝ್ ನೇತೃತ್ವ ವಹಿಸಿದ ಬ್ರಿಟಿಷ್ ರಾಯಭಾರಿ

Update: 2019-05-27 10:13 GMT

ಸುಡಾನ್, ಮೇ 27: ಸಾರ್ವಜನಿಕರಿಗಾಗಿ ಸುಡಾನ್ ನಲ್ಲಿ ಇಫ್ತಾರ್ ಕೂಟ ಏರ್ಪಡಿಸಿದ ಸುಡಾನ್ ನ ಬ್ರಿಟಿಷ್ ರಾಯಭಾರಿಯೊಬ್ಬರು ನಮಾಝ್ ನ ನೇತೃತ್ವ ವಹಿಸಿದ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.

ತಮ್ಮ ಮನೆಯ ಹೊರಭಾಗದಲ್ಲಿ ನಡೆದ ಇಫ್ತಾರ್ ಕೂಟದಲ್ಲಿ ಇರ್ಫಾನ್ ಸಿದ್ದಿಕ್ ಭಾಗವಹಿಸಿರುವ ಫೋಟೊಗಳನ್ನು ರಾಯಭಾರ ಕಚೇರಿಯು ಟ್ವೀಟ್ ಮಾಡಿದೆ. “ತನ್ನ ಮನೆಯ ಹೊರಭಾಗದಲ್ಲಿ ಇಫ್ತಾರ್ ಹಮ್ಮಿಕೊಂಡ ಇರ್ಫಾನ್ ಸಿದ್ದಿಕ್ ಸಾರ್ವಜನಿಕರನ್ನು ಆಹ್ವಾನಿಸಿ ಅವರೊಂದಿಗೆ ಆಹಾರ ಸೇವಿಸಿ ಮಾತುಕತೆ ನಡೆಸಿದರು” ಎಂದು ಟ್ವೀಟ್ ಮಾಡಲಾಗಿದೆ.

“ಇಫ್ತಾರ್ ನಂತರ ನಮಾಝ್ ನ ನೇತೃತ್ವವನ್ನೂ ಇರ್ಫಾನ್ ವಹಿಸಿದರು” ಎಂದು ಟ್ವೀಟ್ ನಲ್ಲಿ ಬರೆಯಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಫೋಟೊಗಳು ವೈರಲ್ ಆಗುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News