×
Ad

ಪುಂಜಾಲಕಟ್ಟೆ: ಪೋಲಿಸ್ ಜಾಗೃತಿ ಕಾರ್ಯಕ್ರಮ

Update: 2019-05-27 18:47 IST

ಬೆಳ್ತಂಗಡಿ: ನ್ಯಾಯಾಲಯದ ಮಾರ್ಗದರ್ಶನದಂತೆ ಪುಂಜಾಲಕಟ್ಟೆ ಪೋಲಿಸ್ ಠಾಣೆಯ ಪೋಲಿಸರು ಕಟ್ಟಡ ನಿರ್ಮಾಣ ಸ್ಥಳಗಳಿಗೆ, ಕಾರ್ಖಾನೆಗಳಿಗೆ ಹಾಗೂ ಅತೀ ಜನ ಸಂದಣಿ ಇರುವ ಪ್ರದೇಶಕ್ಕೆ ಭೇಟಿ ನೀಡಿ ಕಾರ್ಮಿಕರಿಗೆ ಹಾಗೂ ಸಾರ್ವಜನಿಕರಿಗೆ ಪುಂಜಾಲಕಟ್ಟೆ ಎಸ್‍ಐ ಸುನೀತಾ ಅವರ ನೇತೃತ್ವದಲ್ಲಿ ಪೋಲಿಸರು ಕಾನೂನುಗಳ ಕುರಿತು ಮಾಹಿತಿ ನೀಡಿದರು.

ಇಲ್ಲಿನ ಠಾಣಾ ವ್ಯಾಪ್ತಿಯ ಬೃಹತ್ ಕಟ್ಟಡ ನಿರ್ಮಾಣ ಮಾಡುತ್ತಿರುವ ಸ್ಥಳಗಳಿಗೆ ಭೇಟಿ ಕಾರ್ಮಿಕರಿಗೆ ಮಾಹಿತಿಯನ್ನು ಒದಗಿಸಿದರು. ಕಾರ್ಖಾನೆಗಳಲ್ಲಿ, ದೊಡ್ಡ ದೊಡ್ಡ ವಸ್ತ್ರ ಮಳಿಗೆಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಗೂ ಮಾಹಿತಿಯನ್ನು ನೀಡಿಲಾಯಿತು. ವಾಹನ ಚಾಲಕ ಮತ್ತು ಮಾಲಕರಿಗೂ ಸಂಚಾರ ನಿಯದ ಕುರಿತು ಮಾಹಿತಿ ನೀಡಿದರು.

ಸಂಚಾರ ನಿಯಮ ಹಾಗೂ ರಸ್ತೆ ಸುರಕ್ಷತೆ ಕುರಿತು ವಿದ್ಯಾರ್ಥಿಗಳಿಗೆ ಪ್ರಬಂಧ ಹಾಗೂ ಚರ್ಚಾಕೂಟವನ್ನು ಏರ್ಪಡಿಸಲಾಯಿತು. ಪೋಲಿಸರ ನೇತೃತ್ವದಲ್ಲಿ ವಿದ್ಯಾರ್ಥಿಗಳು, ಸಾರ್ವಜನಿಕರಿಂದ ರಸ್ತೆ ಸುರಕ್ಷತೆ ಕುರಿತು ಜಾಥಾವನ್ನು ಹಮ್ಮಿಕೊಳ್ಳಲಾಯಿತು. ಪುಂಜಾಲಕಟ್ಟೆ ಠಾಣೆಯ ಪೋಲಿಸರು ಸಹಕರಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News