3ನೆ ಮಗುವಾಗಿರುವ ಮೋದಿ ಮತದಾನದ ಅವಕಾಶ ಕಳೆದುಕೊಳ್ಳಬಾರದು: ರಾಮದೇವ್ ಗೆ ಒವೈಸಿ ತಿರುಗೇಟು

Update: 2019-05-27 15:11 GMT

ಹೊಸದಿಲ್ಲಿ, ಮೇ 27: ‘ಕುಟುಂಬದಲ್ಲಿರುವ 3ನೆ ಮಗುವಿಗೆ ಮತದಾನದ ಅವಕಾಶ ನೀಡಬಾರದು’ ಎಂದು ಹೇಳಿಕೆ ನೀಡಿರುವ ಬಾಬಾ ರಾಮ್ ದೇವ್ ಗೆ ಪ್ರತಿಕ್ರಿಯಿಸಿರುವ ಎಐಎಂಐಎಂ ನಾಯಕ ಅಸದುದ್ದೀನ್ ಒವೈಸಿ, ‘3ನೆ ಮಗುವಾಗಿರುವ ಕಾರಣ ಪ್ರಧಾನಿ ಮೋದಿ ಮತದಾನದ ಅವಕಾಶವನ್ನು ಕಳೆದುಕೊಳ್ಳಬಾರದು” ಎಂದು ವ್ಯಂಗ್ಯವಾಡಿದ್ದಾರೆ.

1950ರ ಸೆಪ್ಟಂಬರ್ 17ರಂದು ದಾಮೋದರ್ ದಾಸ್ ಮೋದಿ ಮತ್ತು ಹೀರಾಬೆನ್ ದಂಪತಿಯ 3ನೆ ಪುತ್ರನಾಗಿ ನರೇಂದ್ರ ಮೋದಿ ಜನಿಸಿದ್ದರು.

ನಿನ್ನೆ ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡಿದ್ದ ಬಾಬಾ ರಾಮ್ ದೇವ್, “ಮುಂದಿನ 50 ವರ್ಷಗಳಲ್ಲಿ ಭಾರತದ ಜನಸಂಖ್ಯೆಯು 150 ಕೋಟಿಗಿಂತ ಹೆಚ್ಚಬಾರದು. ಮೂರನೆ ಮಗುವಿಗೆ ಮತದಾನಕ್ಕೆ ಅವಕಾಶ ಕಲ್ಪಿಸದೇ ಇದ್ದಾಗ, ಚುನಾವಣೆಯಲ್ಲಿ ಸ್ಪರ್ಧೆಗೆ ಅವಕಾಶ ಕಲ್ಪಿಸದೇ ಇದ್ದಾಗ, ಸರಕಾರದ ಯಾವುದೇ ಸವಲತ್ತುಗಳನ್ನು ಪಡೆಯಲು ಸಾಧ್ಯವಿಲ್ಲ ಎಂದು ಕಾನೂನು ತಂದಾಗ ಮಾತ್ರ ಇದು ಸಾಧ್ಯ” ಎಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News