ಪಬ್ಲಿಕ್ ಪರೀಕ್ಷೆ: ಕೋಯನಗರ ಮದ್ರಸಕ್ಕೆ ಶೇ.100 ಫಲಿತಾಂಶ

Update: 2019-05-27 15:19 GMT

ನಾವುಂದ, ಮೇ 27: ಇಸ್ಲಾಮಿಕ್ ಎಜುಕೇಶನಲ್ ಬೋರ್ಡ್ ಅಧೀನದಲ್ಲಿ ಕಳೆದ ಎಪ್ರಿಲ್ ತಿಂಗಳಲ್ಲಿ ನಡೆದ 2018-19ನೇ ಸಾಲಿನ ಪಬ್ಲಿಕ್ ಪರೀಕ್ಷೆಯಲ್ಲಿ ಕೋಯನಗರ ಬುಸ್ತಾನುಲ್ ಉಲೂಂ ಮದ್ರಸ ಶೇ.100 ಫಲಿತಾಂಶ ದಾಖಲಿಸಿದೆ.

ಮದ್ರಸದಿಂದ ಹೆಸರು ನೋಂದಾಯಿಸಲ್ಪಟ್ಟ ಎಲ್ಲಾ ವಿದ್ಯಾರ್ಥಿಗಳು ಗರಿಷ್ಠ ಅಂಕದೊಂದಿಗೆ ತೇರ್ಗಡೆಯಾಗಿದ್ದಾರೆ. ಕೋಯನಗರ ಮದ್ರಸಕ್ಕೆ ಉತ್ತಮ ಫಲಿತಾಂಶವನ್ನು ತಂದು ಕೊಟ್ಟ ವಿದ್ಯಾರ್ಥಿಗಳಿಗೆ, ಅದಕ್ಕಾಗಿ ಪರಿಶ್ರಮಿಸಿದ ಅಧ್ಯಾಪಕರಿಗೆ ಕೋಯನಗರ ನೂರುಲ್ ಹುದಾ ಮಸೀದಿ ಆಡಳಿತ ಸಮಿತಿ ಅಭಿನಂದನೆ ಸಲ್ಲಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News