ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘಕ್ಕೆ ಚುನಾವಣೆ
ಉಡುಪಿ, ಮೇ 27: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಉಡುಪಿ ಜಿಲ್ಲಾ ಶಾಖೆಗೆ 2019-24ನೇ ಸಾಲಿನ ಚುನಾವಣಾ ವೇಳಾಪಟ್ಟಿ ನಿಗದಿ ಯಾಗಿದ್ದು, ಉಡುಪಿ ಜಿಲ್ಲಾ ಶಾಖೆಯ ಚುನಾವಣಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿಗಳಾಗಿ ಕೃಷಿ ಇಲಾಖೆಯ ನಿವೃತ್ತ ಅಧಿಕಾರಿಗಳಾದ ಅರುಣ್ ಮಾರುತಿ ಲೋಕರೆ ಹಾಗೂ ಕಿಶೋರ್ ಕುಮಾರ್ ಇವರನ್ನು ನೇಮಕ ಮಾಡಲಾಗಿದೆ.
ನಾಮಪತ್ರಗಳ ವಿತರಣೆ ಮೇ 27ರಿಂದ ಆರಂಭವಾಗಿದ್ದು, ಜೂನ್ 3ರ ಸಂಜೆ 4 ಗಂಟೆಯವರೆಗೆ ಸಂಘದ ಕಛೇರಿಯಲ್ಲಿ ನೀಡಲಾಗುವುದು. ನಾಮಪತ್ರ ಸಲ್ಲಿಸಲು ಜೂ.3 ಕೊನೆಯ ದಿನ. ನಾಮಪತ್ರ ವಾಪಾಸ್ಸು ಪಡೆಯಲು ಜೂ.4ರ ಸಂಜೆ 4ಗಂಟೆಯವರೆಗೆ ಅವಕಾಶವಿದೆ. ಚುನಾವಣೆ ಜೂನ್ 13ರಂದು ಬೆಳಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ನಡೆಯಲಿದೆ.
ಹೆಚ್ಚಿನ ಮಾಹಿತಿಗೆ ಚುನಾವಣಾಧಿಕಾರಿಗಳನ್ನು (ದೂರವಾಣಿ ಸಂಖ್ಯೆ: 9449029007) ಸಂಘದ ಕಚೇರಿ, ಮಿಷನ್ ಆಸ್ಪತ್ರೆ ರಸ್ತೆ ಇವರನ್ನು ಸಂಪರ್ಕಿ ಸುವಂತೆ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸುಬ್ರಹ್ಮಣ್ಯ ಶೇರಿಗಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.