ವಿಟ್ಲ: ಮುಸ್ಲಿಮರಿಗಾಗಿ ಮನೆಯಲ್ಲಿ ಇಫ್ತಾರ್ ಕೂಟ ಏರ್ಪಡಿಸಿ ಸೌಹಾರ್ದ ಮೆರೆದ ಲೋಕನಾಥ್ ಮುತ್ತಪ್ಪ ಶೆಟ್ಟಿ
Update: 2019-05-27 22:17 IST
ಬಂಟ್ವಾಳ, ಮೇ 17: ವಿಟ್ಲ ಮುಡ್ನೂರು ಗ್ರಾಮದ ಕುಂಡಡ್ಕ ಮರುವಾಳ ನಿವಾಸಿ, ಮುಂಬೈ ಉದ್ಯಮಿ ಲೋಕನಾಥ್ ಮುತ್ತಪ್ಪ ಶೆಟ್ಟಿ ಅವರು ತನ್ನ ಮನೆಯಲ್ಲಿ ಇಫ್ತಾರ್ ಕೂಟ ಆಯೋಜಿಸುವ ಮೂಲಕ ಸೌಹಾರ್ದ ಮೆರೆದಿದ್ದಾರೆ.
ಕುಂಡಡ್ಕ ಮರುವಾಳದ ಲೋಕನಾಥ್ ಮುತ್ತಪ್ಪ ಶೆಟ್ಟಿ (ಲೋಕಣ್ಣ ಮುಂಬೈ) ಅವರು, ರವಿವಾರ ತನ್ನ ಮನೆಯ ಆವರಣದಲ್ಲಿ ಏರ್ಪಡಿಸಿದ್ದ ಇಫ್ತಾರ್ ಕೂಟಕ್ಕೆ ಕುಂಡಡ್ಕ ಸೇರಿದಂತೆ ವಿಟ್ಲ, ಕಂಬಳಬೆಟ್ಟು, ಚಂದಳಿಕೆ, ಕಬಕ ಮೊದಲಾದ ಕಡೆಗಳಿಂದ ನೂರಾರು ಮುಸ್ಲಿಮರು ಭಾಗವಹಿಸಿ, ಉಪವಾಸ ತೊರೆದು ಸಾಕ್ಷಿಯಾದರು.
ಮುತ್ತಣ್ಣ ಅವರು ಕಳೆದ ಹಲವಾರು ವರ್ಷಗಳಿಂದ ಮುಂಬೈಯಲ್ಲಿ ಉದ್ಯಮ ನಡೆಸುತ್ತಿದ್ದಾರೆ.
ಇಫ್ತಾರ್ ಗೆ ಬೇಕಾದ ವಿವಿಧ ಬಗೆಯ ಪಾನೀಯಗಳು, ಹಣ್ಣು ಹಂಪಲು, ರೊಟ್ಟಿ, ಸಮೂಸ ಮೊದಲಾದ ತಿಂಡಿ-ತಿನಿಸುಗಳನ್ನು ಮನೆಯಲ್ಲಿ ತಯಾರಿಸಿರುವುದು ವಿಶೇಷ.