×
Ad

ಅಕ್ರಮ ಮದ್ಯ ಮಾರಾಟ: ಮಹಿಳೆ ಬಂಧನ

Update: 2019-05-27 22:22 IST

ಕುಂದಾಪುರ, ಮೇ 27: ಕೆಂಚನೂರು ಗ್ರಾಮದ ಮಲ್ಲಾರಿ ಎಂಬಲ್ಲಿ ಮೇ 26ರಂದು ಸಂಜೆ ವೇಳೆ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಮಹಿಳೆಯೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಮಲ್ಲಾರಿ ನಿವಾಸಿ ಇಂದಿರಾ(63) ಬಂಧಿತ ಆರೋಪಿ. ಆಕೆಯಿಂದ 8,220ರೂ. ಮೌಲ್ಯದ ಮದ್ಯ ಹಾಗೂ 860ರೂ. ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News