ಬ್ರಹ್ಮಾವರ: ಪೆಟ್ರೋಲ್ ಬಂಕ್‌ನ ಹಣ ಕಳವು
Update: 2019-05-27 22:30 IST
ಬ್ರಹ್ಮಾವರ, ಮೇ 27: ಹೇರಾಡಿ ಜಂಕ್ಷನ್ ಬಳಿಯ ಪೆಟ್ರೋಲ್ ಬಂಕ್‌ನ ಕಚೇರಿಗೆ ಮೇ 26ರಂದು ರಾತ್ರಿ ವೇಳೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ನಗದು ಕಳವು ಮಾಡಿಕೊಂಡು ಹೋಗಿರುವ ಬಗ್ಗೆ ವರದಿಯಾಗಿದೆ.
ಬಾರಕೂರು ನಾಗರಮಠ ನಿವಾಸಿ ಗಣೇಶ್ ಶೆಟ್ಟಿ ಎಂಬವರ ಶ್ರೀಸಿದ್ದಿ ವಿನಾಯಕ ಪೆಟ್ರೋಲ್ ಬಂಕ್‌ನ ಕಚೇರಿಯ ಬೀಗ ಮುರಿದು ಒಳನುಗ್ಗಿದ ಕಳ್ಳರು, ಕಪಾಟಿನಲ್ಲಿದ್ದ 2,14,000ರೂ. ಹಣ ಮತ್ತು ಸಿಸಿಟಿವಿ ಕ್ಯಾಮರದ ಡಿವಿಆರ್ ಕಳವು ಮಾಡಿಕೊಂಡು ಹೋಗಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.