ಲೋಕಪಾಲ ಲಾಂಛನ,ಧ್ಯೇಯವಾಕ್ಯ ರಚಿಸಿ: ಬಹುಮಾನ ಗೆಲ್ಲಿ!

Update: 2019-05-28 15:09 GMT

ಹೊಸದಿಲ್ಲಿ,ಮೇ 28: ಭ್ರಷ್ಟಾಚಾರ ನಿಗ್ರಹ ಒಂಬುಡ್ಸ್‌ಮನ್ ಆಗಿ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಲೋಕಪಾಲ ತನ್ನ ಲಾಂಛನ ಮತ್ತು ಧ್ಯೇಯವಾಕ್ಯ ರಚನೆಗಾಗಿ ಸ್ಪರ್ಧೆಗೆ ಚಾಲನೆ ನೀಡಿದೆ. ಇದಕ್ಕಾಗಿ ಪ್ರವೇಶಗಳನ್ನು ಆಹ್ವಾನಿಸಲಾಗಿದ್ದು,ವಿಜೇತರು 25,000 ರೂ.ನಗದು ಬಹುಮಾನವನ್ನು ಪಡೆಯಲಿದ್ದಾರೆ.

ಆಸಕ್ತರು ತಮ್ಮ ಪ್ರವೇಶಗಳನ್ನು ಜೂನ್ 13ರೊಳಗೆ ಸಲ್ಲಿಸಬಹುದಾಗಿದೆ. ಧ್ಯೇಯವಾಕ್ಯ/ಘೋಷಣೆಯು ಆಕರ್ಷಕವಾಗಿದ್ದು,ಹಿಂದಿ ಅಥವಾ ಸಂಸ್ಕೃತ ಅಥವಾ ಇಂಗ್ಲೀಷ್ ಭಾಷೆಯಲ್ಲಿರಬೇಕು ಮತ್ತು ನಾಲ್ಕೈದು ಶಬ್ದಗಳಿಗಿಂತ ಹೆಚ್ಚಿರಬಾರದು ಎಂದು ಅಧಿಕೃತ ಪ್ರಕಟಣೆಯು ತಿಳಿಸಿದೆ.

ಆಯ್ಕೆ ಸಮಿತಿಯು ನಿಗದಿತ ಗಡುವಿನೊಳಗೆ ಸ್ವೀಕೃತ ಪ್ರವೇಶಗಳ ಮೌಲ್ಯಮಾಪನ ನಡೆಸಲಿದೆ ಮತ್ತು ಅದರ ನಿರ್ಧಾರವು ಅಂತಿಮವಾಗಿರುತ್ತದೆ ಎಂದು ಅದು ಹೇಳಿದೆ. ಈವರೆಗೆ ಲೋಕಪಾಲ ಧ್ಯೇಯವಾಕ್ಯಕ್ಕಾಗಿ ಒಟ್ಟು 1,239 ಮತ್ತು ಲಾಂಛನಕ್ಕಾಗಿ 365 ಪ್ರವೇಶಗಳು ಬಂದಿವೆ ಎಂದು ಅಧಿಕಾರಿಗಳು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News