ಜೂ.1:ಭಾಗೀರಥಿ, ಮಂಚಿ ಬಾವಾಗೆ ಚಾವಡಿ ಸನ್ಮಾನ
Update: 2019-05-29 18:34 IST
ಮಂಗಳೂರು, ಮೇ 29: ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ವತಿಯಿಂದ ತುಳುನಾಡಿನ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಸಾಧಕರನ್ನು ಗುರುತಿಸಿ ಪ್ರತಿ ತಿಂಗಳ ಚಾವಡಿ ಕಾರ್ಯಕ್ರಮದಲ್ಲಿ ಒಬ್ಬ ಸಾಧಕರನ್ನು ಸನ್ಮಾನಿಸಲು ತೀರ್ಮಾನಿಸಿರುವಂತೆ ಜೂನ್ 1ರ ಅಪರಾಹ್ನ 3:30ಕ್ಕೆ ಅಕಾಡಮಿಯ ಸಿರಿಚಾವಡಿಯಲ್ಲಿ ಹಿರಿಯ ಸಮಾಜ ಸೇವಕಿ ಭಾಗೀರಥಿ, ಮಂಚಿ ಬಾವ ಇವರನ್ನು ಸನ್ಮಾನಿಸಲಾಗುವುದು.
ಅಕಾಡಮಿಯ ಅಧ್ಯಕ್ಷ ಎ.ಸಿ.ಭಂಡಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.