ಕೊಂಕಣಿ ಮಕ್ಕಳ ‘ಕಾಜುಲೊ’ ಬೇಸಿಗೆ ಶಿಬಿರ ಸಮಾರೋಪ
ಮಂಗಳೂರು, ಮೇ 29: ಜೆಪ್ಪುಪ್ಯಾರಿಷನರ್ಸ್ ಅಸೋಸಿಯೇಶನ್ ವತಿಯಿಂದ ಸಂತ ಜೋಸೆಫ್ ನಾಟಕ ಸಂಘದ ಸಭಾಂಗಣದಲ್ಲಿ ಆಯೋಜಿಸಿದ್ದ ‘ಕಾಜುಲೊ- ಮಕ್ಕಳ ರಜಾ ಶಿಬಿರದ ಸಮಾರೋಪವು ಮಂಗಳವಾರ ನಡೆಯಿತು.
ಮುಖ್ಯ ಅತಿಥಿಯಾಗಿ ಅನಿವಾಸಿ ಉದ್ಯಮಿ ಜೇಮ್ಸ್ ಮೆಂಡೋನ್ಸಾ ಭಾಗವಹಿಸಿ ಶುಭ ಹಾರೈಸಿದರು. ಬಲ್ಮಠ ಮೆಡಿಕಲ್ಸ್ನ ಮಾಲಕಿ ಮೆಟಿಲ್ಡಾ ಪಿಂಟೊ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ಹಾಗೂ ಪುಸ್ತಕಗಳನ್ನು ನೀಡಿ ಶುಭ ಹಾರೈಸಿದರು. ವಿಭಾಗ ಶ್ರೇಷ್ಟರಾಗಿ ಆಯ್ಕೆಯಾದ ನಿಶಾ ಆರಾನ್ಹಾ (ಗಾಯನ), ಆಡ್ರಿನ್ ಫೆರ್ನಾಂಡಿಸ್ (ನೃತ್ಯ) ಹಾಗೂ ರಿಯಾನಾ ಮಿನೇಜಸ್ (ನಾಟಕ) ಇವರಿಗೆ ತಲಾ ರೂ. ಎರಡು ಸಾವಿರ ಹಾಗೂ ಶ್ರೇಷ್ಟ ಶಿಬಿರಾರ್ಥಿಯಾಗಿ ಆಯ್ಕೆಯಾದ ಎಲ್ವಿಸ್ ಲೋಬೊ ಇವರಿಗೆ ಮೂರು ಸಾವಿರ ರೂ. ನೀಡಿ ಗೌರವಿಸಲಾಯಿತು. ಬ್ಲೆನನ್ ಸಿಮೆಂಟೊ, ಸೋನಿಯಾ ಡಿಸೋಜ, ಜೋಶ್ವಾ ತೋರಸ್ ಹಾಗೂ ನಿಕಿತಾ ಬೆನ್ನಿಸ್ ಅನುಭವಗಳನ್ನು ಹಂಚಿಕೊಂಡರು.
ಈ ಸಂದರ್ಭ ಶಿಬಿರದ ನಿರ್ದೇಶಕ ಎರಿಕ್ ಒಝೇರಿಯೊ ಹಾಗೂ ತರಬೇತುದಾರರಾದ ವಿಕ್ಟರ್ ಮಥಾಯಸ್, ಜೈಸನ್ ಸಿಕ್ವೇರಾ, ವಿಕಾಸ್ ಕಲಾಕುಲ್, ರಾಹುಲ್ ಪಿಂಟೊ, ವೆಲನಿ ಗೋವಿಯಸ್, ಫ್ಲಾವಿಯಾ ರೊಡ್ರಿಗಸ್, ಜೈಸನ್ ಲೋಬೊ, ಡಿಯಾಲ್ ಡಿಸೋಜ ಮತ್ತು ರಸ್ಸೆಲ್ ರೊಡ್ರಿಗಸ್ ಇವರನ್ನು ಸಂಘದ ಅಧ್ಯಕ್ಷ ವಿಲ್ಸನ್ ಬ್ಯಾಪ್ಟಿಸ್ಟ್ ಗೌರವಿಸಿದರು.
ಖಜಾಂಚಿ ಸ್ವೀಟಿ ಸಿಕ್ವೇರಾ, ಜಾಸ್ಮಿನ್ ಮೊರೆರಾ, ಗ್ಲಾಡಿಸ್, ಕೀರ್ತಿ ಸಿಕ್ವೆರಾ ಉಪಸ್ಥಿತರಿದ್ದರು. ಕಾರ್ಯದರ್ಶಿ ಸತೀಶ್ ಫೊನ್ಸೆಕಾ ವಂದಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳು ತಾವು ಕಲಿತ ನೃತ್ಯ, ಗಾಯನ ಹಾಗೂ ಕಿರು ನಾಟಕ ಆಮ್ಕಾಂ ಇಲ್ಲೆಂ ಆಯ್ಕಾ ಪ್ರದರ್ಶಿಸಿದರು.