×
Ad

​ಜೂ.1-30: ಶ್ರೀನಿವಾಸ ಆಸ್ಪತ್ರೆಯಲ್ಲಿ ಕೇಶ ಮತ್ತು ಸೌಂದರ್ಯ ಶಾಸ್ತ್ರ ಮಾಸ

Update: 2019-05-29 18:36 IST

ಮಂಗಳೂರು, ಮೇ 29: ಸುರತ್ಕಲ್ ಸಮೀಪದ ಮುಕ್ಕಾದಲ್ಲಿರುವ ಶ್ರೀನಿವಾಸ ಆಸ್ಪತ್ರೆಯ ಡಾ. ಆದಿಲ್ ಅಲಿ (ಪ್ಲಾಸ್ಟಿಕ್ ಸರ್ಜರಿ) ಮತ್ತು ಡಾ.ವಿಜೇತ (ಚರ್ಮ ವಿಭಾಗ) ಇವರ ನೇತೃತ್ವದಲ್ಲಿ ಜೂ. 1ರಿಂದ 30ರ (ರವಿವಾರ ಹೊರತುಪಡಿಸಿ) ತನಕ ಆಸ್ಪತ್ರೆ ಕ್ಯಾಂಪಸ್‌ನಲ್ಲಿ ಕೇಶ ಮತ್ತು ಸೌಂದರ್ಯ ಶಾಸ್ತ್ರ ಕಾರ್ಯಕ್ರಮ ನಡೆಯಲಿದೆ.

ಶಿಬಿರದಲ್ಲಿ ಕೇಶ ಮತ್ತು ಚರ್ಮ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ಒದಗಿಸಲಾಗುವುದು. ಆಸಕ್ತರು ಬೆಳಗ್ಗೆ ಗಂಟೆ 9ರಿಂದ ಸಂಜೆ 4ರ ತನಕ ಆಸ್ಪತ್ರೆಯ ಹೊರ ರೋಗಿ ವಿಭಾಗಕ್ಕೆ ಭೇಟಿ ನೀಡಿ ಪ್ರಯೋಜನ ಪಡೆದುಕೊಳ್ಳಬಹುದು. ಶಿಬಿರದಲ್ಲಿ ಕೇಶ ಪುನರುಜ್ಜೀವನ, ಕೇಶ ವರ್ಗಾವಣೆ ಮತ್ತು ಕೂದಲು ಉದುರುವಿಕೆಗೆ ಪ್ಲೇಟ್‌ಲೆಟ್ ವರ್ಧಿತ ಪ್ಲಾಸ್ಮಾ ಚಿಕಿತ್ಸೆ ನೀಡಲಾಗುವುದು.

ಸೌಂದರ್ಯ ವರ್ಧನೆ

ಮುಖದ ಸೌಂದರ್ಯ ವರ್ಧನೆ ಚಿಕಿತ್ಸೆ (ಆರ್‌ಆರ್‌ಪಿ) ಮುಖದಲ್ಲಿಯ ಕಲೆಗಳ ನಿವಾರಣೆ ಮತ್ತು ಚರ್ಮವನ್ನು ನಯಗೊಳಿಸುವಿಕೆ, ಲೇಸರ್ ಮೂಲಕ ಕೂದಲು ನಿವಾರಣೆ, ವಯೋ ಸಹಜ ಸಮಸ್ಯೆಯಿಂದ ಮುಖದ ಭಾಗದಲ್ಲಿ ಉಂಟಾಗುವ ತೊಂದರೆಗಳ ನಿವಾರಣೆ, ಗಾಯಗಳ ಚಿಕಿತ್ಸೆ, ಗುಳ್ಳೆಗಳು ಗಾಯಗಳು, ಕಪ್ಪುಚುಕ್ಕೆಗಳು ರಚನೆಯಾಗಿದ್ದರೆ ಅವುಗಳಿಗೆ ಚಿಕಿತ್ಸೆ, ಕಿವಿ ಭಾಗದ ತೊಂದರೆಗಳಿಗೆ ಚಿಕಿತ್ಸೆ, ಬೊಜ್ಜು ನಿವಾರಣಾ ಚಿಕಿತ್ಸೆ ನೀಡಲಾಗುವುದು. ವೈದ್ಯಕೀಯ ಪರೀಕ್ಷೆಗಳು, ಕ್ಲಿನಿಕಲ್ ಪ್ರಕ್ರಿಯೆಗಳಿಗೂ ರಿಯಾಯಿತಿ ದರವಿದೆ.

ಶ್ರೀನಿವಾಸ ಆಸ್ಪತ್ರೆಯ ಚರ್ಮ ಮತ್ತು ಪ್ಲಾಸ್ಟಿಕ್ ಸರ್ಜರಿ ವಿಭಾಗವು ಸ್ತಾರ ವ್ಯಾಪ್ತಿಯ ಅನುಭವವಿರುವ ವಿಶೇಷ ತಜ್ಞತೆ ಇರುವ ಅತ್ಯುತ್ತಮ ವೈದ್ಯರ ತಂಡ ಹೊಂದಿದೆ. ವಿವಿಧ ಪ್ರಕ್ರಿಯೆಗಳನ್ನು ನಡೆಸುವುದಕ್ಕಾಗಿ ಅತ್ಯುತ್ತಮ ಗುಣಮಟ್ಟದ ತಂತ್ರಜ್ಞಾನ ಮತ್ತು ಉಪಕರಣಗಳನ್ನು ಹೊಂದಿದೆ. ಶಿಬಿರದ ಪ್ರಯೋಜನ ಪಡೆಯುವಂತೆ ಕೋರಲಾಗಿದೆ. ಮಾಹಿತಿಗಾಗಿ ಡಾ.ಆದಿಲ್ ಅಲಿ (9045902033,) ಮಾರ್ಕೆಟಿಂಗ್ ವಿಭಾಗ-6363506735. ಇವರನ್ನು ಸಂಪರ್ಕಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News