×
Ad

ಜೂ. 2ರಂದು ಆಶ್-ಅರಿಯ್ಯಾದಲ್ಲಿ ಪ್ರಾರ್ಥನ ಸಂಗಮ

Update: 2019-05-29 18:38 IST

ಬಂಟ್ವಾಳ, ಮೇ 29: ದಾರುಲ್ ಅಶ್-ಅರಿಯ್ಯಾ ಎಜ್ಯುಕೇಶನಲ್ ಸೆಂಟರ್ ಸುರಿಬೈಲಿನಲ್ಲಿ ಪ್ರಾರ್ಥನಾ ಸಂಗಮ ಹಾಗೂ ಇಫ್ತಾರ್ ಕೂಟ ಜೂ. 2ರಂದು ಸಂಜೆ 4.30ಕ್ಕೆ ಸುರಿಬೈಲ್ ದಾರುಲ್ ಅಶ್-ಅರಿಯ್ಯಾ ವಠಾರದಲ್ಲಿ ನಡೆಯಲಿದೆ. ಅಸೈಯ್ಯದ್ ಯು.ಎಸ್. ಶಿಹಾಬುದ್ದೀನ್ ತಂಙಳ್ ಮದಕ ನೇತೃತ್ವ ವಹಿಸಲಿದ್ದಾರೆ.

ಸಂಸ್ಥೆಯ ಮ್ಯಾನೇಜರ್ ಸಿ.ಎಚ್ ಮುಹಮ್ಮದಾಲಿ ಸಖಾಫಿ ಮುಖ್ಯ ಪ್ರಭಾಷಣಗೈಯಲಿದ್ದಾರೆ. ಸಿ.ಎಚ್. ಯೂಸುಫ್ ಮದನಿ ಮಸ್ಕತ್, ವಾಲೆ ಮುಂಡೋವು ಉಸ್ತಾದ್, ಬೊಳ್ಮಾರ್ ಉಸ್ತಾದ್ ಮುಂತಾದವರು ಭಾಗವಹಿಸುವರು ಎಂದು ಪ್ರಟಕನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News