ಟ್ವೆಕಾಂಡೋ ಚಾಂಪಿಯನ್‍ಶಿಪ್: ಬಂಟ್ವಾಳದ ವಿದ್ಯಾರ್ಥಿಗಳಿಂದ ವಿಶಿಷ್ಟ ಸಾಧನೆ
ಬಂಟ್ವಾಳ, ಮೇ 28: ದಕ್ಷಿಣ ಕನ್ನಡ ಜಿಲ್ಲಾ ಟೈಕಾಂಡೊ ತಂಡದಲ್ಲಿ ಗುರುತಿಸಿ ರಾಜ್ಯ ಮಟ್ಟದ ದಿ ಪ್ರಿನ್ಸ್ ಕಲ್-2019 ಟ್ವೆಕಾಂಡೋ ಚಾಂಪಿಯನ್‍ಶಿಪ್‍ನಲ್ಲಿ ಪ್ರತಿನಿಧಿಸಿದ ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಫಿಟ್ನೆಸ್ ಮಲ್ಟಿ ಜಿಮ್ ಹಾಗೂ ಮಾರ್ಷಲ್ ಆರ್ಟ್ಸ್ ಸೆಂಟರಿನ 11 ಟೈಕಾಂಡೊ ವಿದ್ಯಾರ್ಥಿಗಳು ಫೈಟಿಂಗ್ ಹಾಗೂ ಪೂಂಸೆ (ಕಟ) ವಿಭಾಗದಲ್ಲಿ ಭಾಗವಹಿಸಿ 7 ಚಿನ್ನ, 8 ಬೆಳ್ಳಿ ಹಾಗೂ 7 ಕಂಚಿನ ಪದಗಳನ್ನು ಗೆದ್ದುಕೊಳ್ಳುವ ಮೂಲಕ ವಿಶಿಷ್ಟ ಸಾಧನೆ ಮೆರೆದಿದ್ದಾರೆ.
ಮೇ 26ರಂದು ಬೆಂಗಳೂರಿನ ಕಲ್ಯಾಣನಗರದ ಪ್ರಿನ್ಸ್‍ಟೋನ್ ಇಂಟರ್‍ನ್ಯಾಷನ್ ಸ್ಕೂಲ್ ಮೈದಾನದಲ್ಲಿ ನಡೆದ ಸ್ಪರ್ಧೆಯಲ್ಲಿ ಭಾಗವಹಿಸಿ ವಿದ್ಯಾರ್ಥಿಗಳು ಈ ಸಾಧನೆ ಮೆರೆದಿದ್ದಾರೆ.
ವಿದ್ಯಾರ್ಥಿಗಳಾದ ಮುಝಮ್ಮಿರುಲ್ ಅಮೀನ್ ಫೈಟಿಂಗ್ ಹಾಗೂ ಪೂಮ್ಸೆ ವಿಭಾಗದಲ್ಲಿ ಚಿನ್ನ, ಮುಹಮ್ಮದ್ ಆತಿಫ್ ಫೈಟಿಂಗ್ ವಿಭಾಗದಲ್ಲಿ ಚಿನ್ನ ಹಾಗೂ ಪೂಮ್ಸೆ ವಿಭಾಗದಲ್ಲಿ ಬೆಳ್ಳಿ, ಮುಹಮ್ಮದ್ ಶಾಮಿಲ್ ಫೈಟಿಂಗ್ ವಿಭಾಗದಲ್ಲಿ ಚಿನ್ನ ಹಾಗೂ ಪೂಮ್ಸೆ ವಿಭಾಗದಲ್ಲಿ ಬೆಳ್ಳಿ, ಮುಹಮ್ಮದ್ ಫಾಝಿಲ್ ಫೈಟಿಂಗ್ ವಿಭಾಗದಲ್ಲಿ ಚಿನ್ನ ಹಾಗೂ ಪೂಮ್ಸೆ ವಿಭಾಗದಲ್ಲಿ ಬೆಳ್ಳಿ, ಮುಹಮ್ಮದ್ ಫನ್ನಾನ್ ಫೈಟಿಂಗ್ ವಿಭಾಗದಲ್ಲಿ ಚಿನ್ನ ಹಾಗೂ ಪೂಮ್ಸೆ ವಿಭಾಗದಲ್ಲಿ ಕಂಚು, ಮುಹಮ್ಮದ್ ಶಹದ್ ಸುಲ್ತಾನ್ ಫೈಟಿಂಗ್ ವಿಭಾಗದಲ್ಲಿ ಚಿನ್ನ ಹಾಗೂ ಪೂಮ್ಸೆ ವಿಭಾಗದಲ್ಲಿ ಕಂಚು, ಭವಿಷ್ ಡಿ ಪೂಮ್ಸೆ ವಿಭಾಗದಲ್ಲಿ ಬೆಳ್ಳಿ ಹಾಗೂ ಫೈಟಿಂಗ್ ವಿಭಾಗದಲ್ಲಿ ಕಂಚು, ಮುಹಮ್ಮದ್ ಅಯಾನ್ ಫೈಟಿಂಗ್ ವಿಭಾಗದಲ್ಲಿ ಬೆಳ್ಳಿ ಹಾಗೂ ಪೂಮ್ಸೆ ವಿಭಾಗದಲ್ಲಿ ಕಂಚು, ಫಝಲ್ ಎ. ಫೈಟಿಂಗ್ ವಿಭಾಗದಲ್ಲಿ ಬೆಳ್ಳಿ ಹಾಗೂ ಪೂಮ್ಸೆ ವಿಭಾಗದಲ್ಲಿ ಕಂಚು, ಮುಹಮ್ಮದ್ ನಶಲ್ ಫೈಟಿಂಗ್ ವಿಭಾಗದಲ್ಲಿ ಬೆಳ್ಳಿ ಹಾಗೂ ಪೂಮ್ಸೆ ವಿಭಾಗದಲ್ಲಿ ಕಂಚು, ಮುಹಮ್ಮದ್ ಇಸ್ಮಾಯಿಲ್ ಮುಫೈನ್ ಫೈಟಿಂಗ್ ವಿಭಾಗದಲ್ಲಿ ಕಂಚು ಹಾಗೂ ಪೂಮ್ಸೆ ವಿಭಾಗದಲ್ಲಿ ಕಂಚಿನ ಪದಕ ಗೆದ್ದು ಸಾಧನೆಗೈದಿದ್ದಾರೆ.
ಈ ಎಲ್ಲ ವಿದ್ಯಾರ್ಥಿಗಳಿಗೆ ದಕ್ಷಿಣ ಕನ್ನಡ ಜಿಲ್ಲಾ ಟೈಕಾಂಡೊ ತಂಡದ ತರಬೇತುದಾರ ಹಾಗೂ ಪಾಣೆಮಂಗಳೂರಿನ ಫಿಟ್ನೆಸ್ ಮಲ್ಟಿ ಜಿಮ್ ಮತ್ತು ಮಾರ್ಷಲ್ ಆರ್ಟ್ಸ್ ಸೆಂಟರಿನ ಟೈಕಾಂಡೊ ತರಬೇತುದಾರ ಇಸಾಕ್ ನಂದವಾರ ತರಬೇತು ನೀಡಿದ್ದು, ತಂಡದ ಮ್ಯಾನೇಜರ್ ಆಗಿ ಟ್ವೆಕಾಂಡೋ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ಆಟಗಾರ್ತಿ ಆರ್. ರಕ್ಷಯಾ ಹಾಗೂ ಸಹಾಯಕರಾಗಿ ಶಿಫಾನ್, ಮನೀಶ್ ಮೊಗರ್ನಾಡು, ಮುಶ್ತಾಕ್ ಗೋಳ್ತಮಜಲು ಅವರು ಸಹಕರಿಸಿದ್ದಾರೆ.