×
Ad

‘ನಾಂದಿ’ ರಂಗೋತ್ಸವ ದ ಎರಡು ನಾಟಕಳ ಯಶಸ್ವಿ ರಂಗಪ್ರಯೋಗ

Update: 2019-05-29 22:15 IST

ಮಂಗಳೂರು : ರಂಗಾಯಣ ಮೈಸೂರು ಮತ್ತು ಜರ್ನಿ ಥಿಯೇಟರ್ ಗ್ರೂಫ್ ಮಂಗಳೂರು ಇದರ ಸಹಯೋಗದೊಂದಿಗೆ ಭಾರತೀಯ ರಂಗ ಶಿಕ್ಷಣ ಕೇಂದ್ರ ಮೈಸೂರಿನ ರಂಗಾಭ್ಯಾಸಿಗಳು ಮೇ27 ಮತ್ತು 28ರಂದು ನಗರದ ಡಾನ್ ಬೋಸ್ಕೋ ಸಭಾಂಗಣದಲ್ಲಿ ‘ನೆನಪಾದಳು ಶಕುಂತಲೆ ’ಮತ್ತು ‘ಈ ಕೆಳಗಿನವರು ’ ಎಂಬ ಎರಡು ನಾಟಕಗಳ ಯಶಸ್ವಿ ರಂಗಪ್ರಯೋಗವನ್ನು ನಡೆಸಿದರು.

ಬಡತನದ ವಸ್ತು ನಿಷ್ಠ ಚಿತ್ರಣ ನೀಡುವ ‘ಈ ಕೆಳಗಿನವರರು’...ರಷ್ಯಾದ ವೋಲ್ಗ ನದಿಯ ದಂಡೆಯ ಮೇಲಿನ ಛತ್ರದ ಬದುಕು ಸಾಗಿಸುತ್ತಿರುವ ಬಡ ಕುಂಟುಂಬದ ಬದುಕಿನ ಕಥೆಯನ್ನಾಧರಿಸಿದೆ.ಭಾರತದ ಕೊಳಗೇರಿಗಳ ಮತ್ತು ಜೋಪಡಾ ಪಟ್ಟಿಯ ,ಹಾಡಿಯ ಬಡತನದ ವಾಸ್ತವ ಚಿತ್ರಣವನ್ನು ನೀಡುವ ಈ ನಾಟಕದಲ್ಲಿ .ಛತ್ರದ ಜನರ ಬದುಕಿನಲ್ಲಿ ಬಡತನದ ಘೋರ ಪರಿಣಾಮ ಅದರ ಪರಿಣಾಮವಾಗಿ ಅಲ್ಲಿ ಕಳೆದು ಹೋಗುವ ಮನುಷ್ಯರು ಬದುಕಿಗಾಗಿ ಅಲ್ಲಿ ನಡೆಸುವ ಬವಣೆ ಅವುಗಳ ನಡುವೆಯೂ ಅವರೆ ಕಟ್ಟಿಕೊಂಡ ಬದುಕೆಂಬ ನಾಟಕವನ್ನು ಈ ಕೆಳಗಿನವರು ನಾಟಕದ ಮೂಲಕ ಯಶಸ್ವಿಯಾಗಿ ರಂಗಾಭ್ಯಾಸಿಗಳು ರಂಗದ ಮೇಲೆ ತರುತ್ತಾರೆ. ಕಾಲದ ದೇಶಗಳ ಎಲ್ಲೆಗಳನ್ನು ಮೀರಿ ಮನಷ್ಯನನ್ನು ಎಲ್ಲಾ ಕಾಲದಲ್ಲೂ ಕಾಡುವ ಬಡತನದ ಅಸಾಯಕ ಸ್ಥಿತಿಯನ್ನು ಈ ನಾಟಕದಲ್ಲಿ ಅಭಿವ್ಯಕ್ತವಾಗಿದೆ.ಸಾಮಾಜಿಕ ಅಸ್ತಿತ್ವವನ್ನು ಕಳೆದುಕೊಂಡವರು ಪ್ರೀತಿ, ಬದುಕು, ಸಾವು ಮೊದಲಾದ ಸಂಬಂಧಗಳನ್ನು ಗ್ರಹಿಸುವ ರೀತಿಯನ್ನು ಸಮಾಜದ ನಿರ್ಲಕ್ಷಕ್ಕೆ ಒಳಗಾದ ಈ ಜನರ ಅಸಾಯಕತೆಯನ್ನು ಸಮಾಜದ ನಿರ್ಲಿಪ್ತತೆಯನ್ನು ಮನಸ್ಸಿಗೆ ನಾಟುವಂತೆ, ಯಾರನ್ನೂ ಒಮ್ಮೆ ತಲ್ಲಣಗೊಳಿಸುವಂತೆ ಮಾಡುವ ಸಂಭಾಷಣೆಗಳು ಈ ನಾಟಕದಲ್ಲಿದೆ.

ನಾಟಕದಲ್ಲಿ ಚತ್ರದ ದೃಶ್ಯವನ್ನು ಕಣ್ಣಿಗೆ ಕಟ್ಟುವಂತೆ ವಿನ್ಯಾಸಗೊಳಿಸಿದ ರೀತಿ ,ಉತ್ತರ ಕನ್ನಡದ ಗ್ರಾಮೀಣ ಭಾಷೆಯ ಸೊಗಡಿನೊಂದಿಗೆ ರಂಗದ ಮೇಲೆ ತರಲಾಗಿದೆ. ಹಣದ ಸುತ್ತವ ಬದುಕು ಅದನ್ನು ಕಟ್ಟಿಕೊಳ್ಳಲು ಹೆಣಗಾಡುವವರು.ಕೆಲಸವಿಲ್ಲದೆ ನಿರುದ್ಯೋಗಿಗಳಾದ ಕಾರ್ಮಿಕರ, ಬಡಜನರ ಬದುಕಿನ ಕಠೋರ ಸ್ಥಿತಿಯ ಚಿತ್ರಣ ಈ ನಾಟಕದಲ್ಲಿದೆ.

‘ಈ ಕೆಳಗಿನವರು ಮೈಸೂರಿನ ರಂಗಾಯಣ ಶಿಕ್ಷಣ ಕೇಂದ್ರದ ಭಾರತೀಯ ರಂಗ ಶಿಕ್ಷಣ ಕೇಂದ್ರದ ರಂಗಾಭ್ಯಾಸಿಗಳ ರಂಗೋತ್ಸವ ನಾಂದಿಯ ಮೂಲಕ ನಗರದ ಡಾನ್ ಬೊಸ್ಕೊ ಸಭಾಂಗಣದಲ್ಲಿ ಮೇ 28ರಂದು ಪ್ರದರ್ಶಿದ ಚೆನ್ನಕೇಶವ .ಜಿ ಯವರು ನಿರ್ದೇಶಿಸಿದ ಈ ಕೆಳಗಿನವರು ನಾಟಕ ರಂಗಾಭ್ಯಾಸಿಗಳು ಪರಿಶ್ರಮದ ನಟನೆಯಿಂದ, ಉತ್ತಮ ರಂಗ ವಿನ್ಯಾಸ ಮತ್ತು ಬೆಳಕಿನ ಸಂಯೋಜನೆಯೊಂದಿಗೆ ಪ್ರೇಕ್ಷಕರ ಮನಸ್ಸನ್ನು ಗೆಲ್ಲುವಲ್ಲಿ ಯಶಶ್ಸುಗಳಿದೆ.

ರಷ್ಯಾದ ಖ್ಯಾತ ನಾಟಕಕಾರ ಮ್ಯಾಕ್ಸಿಂ ಗಾರ್ಕಿಯ ‘ಲೋಯರ್ ಡೆಪ್ತ್ಸ್’ನಾಟಕವನ್ನು ಬಿ.ಟಿ.ದೇಸಾಯಿಯವರು ಕನ್ನಡ ಅನುವಾದಿಸಿದ ನಾಟಕ ‘ಈ ಕೆಳಗಿನವರು’ ಮಂಗಳೂರಿನಲ್ಲಿ ಕಂಡ ಒಂದು ಯಶಸ್ವಿ ಪ್ರಯೋಗವಾಗಿದೆ.

*ನೆನಪಾದಳು ಶಕುತಲೆ ..:- ಮಹಾಭಾರತದಲ್ಲಿ ಉಲ್ಲೇಖಿತವಾದ ಕಥೆಯೊಂದನ್ನು ಆಧಾರವಾಗಿಟ್ಟು ಮಹಾಕವಿ ಕಾಳಿದಾಸದ ರಚಿಸಿದ ಅಭಿಜ್ಞಾನ ಶಾಕುಂತಲಾ ನಾಟಕ ಪ್ರಪಂಚದಲ್ಲೇ ಖ್ಯಾತಿ ಪಡೆದಿದೆ.ಈ ನಾಟಕವನ್ನು ಹಲವಾರು ನಾಟಕಕಾರರು ಕನ್ನಡಕ್ಕದಕ್ಕೆ ಅನುವಾದಿಸಿದ್ದಾರೆ. ಈ ಪೈಕಿ ಬನ್ನಂಜೆ ಗೋವಿಂದಾಚಾರ್ಯರು ಸರಳ ಕನ್ನಡದಲ್ಲಿ ಅನುವಾದಿಸಿದ ನಾಟಕವನ್ನು ರಂಗಾಯಣದ ಹಿರಿಯ ಕಲಾವಿದರಾದ ಎಸ್.ರಾಮನಾಥ ಅವರ ಪರಿಕಲ್ಪನೆಯೊಂದಿಗೆ ರಂಗದ ಮೇಲೆ ಪ್ರದರ್ಶನಗೊಂಡಿದೆ. ನಾಟಕದಲ್ಲಿ ದುಷ್ಯಂತ ಮಹಾರಾಜ ಬೇಟೆಗಾಗಿ ಕಾಡಿಗೆ ಬರುತ್ತಾನೆ, ಅಲ್ಲಿ ಸಾಕುತಂದೆ ಕಣ್ವರ ಆಶ್ರಮದಲ್ಲಿರು ಶಕುಂತಲೆಯನ್ನು ಕಾಣುತ್ತಾನೆ, ಮೋಹಗೊಂಡು ಗಾಂಧರ್ವ ವಿಧಿಯ ಮೂಲಕ ಮದುವೆಯಾಗುತ್ತಾನೆ, ನೆನಪಿಗಾಗಿ ಉಂಗುರವೊಂದನ್ನು ತೊಡಿಸಿ ತನ್ನ ರಾಜ್ಯಕ್ಕೆ ಮರಳು ತಾನೆ.ಬಳಿಕ ಕಣ್ವರ ಆಶ್ರಮದಲ್ಲಿ ಶಕುಂತಲೆ ದುಷ್ಯಂತನ ನೆನಪಿನಲ್ಲಿ ಮೈ ಮರೆತಿರುವಾಗ ಒಂದು ದಿನ ದೂರ್ವಾಸ ಮುನಿಯನ್ನು ಉಪಚರಿಸುವುದನ್ನು ಮರೆಯುತ್ತಾಳೆ. ಆಗ ಆ ಮುನಿ ಕುಪಿತಗೊಂಡು ನೀನು ಯಾರನ್ನು ನೆನಪಿಸಿಕೊಂಡು ಮೈ ಮರೆತಿರುವೆಯಾ ಆತ ನಿನ್ನನ್ನು ಮರೆತು ಬಿಡಲಿ ಎಂದು ಶಾಪ ಕೊಡುತ್ತಾನೆ.ಆಕೆಯ ಶಖಿಯರು ಬಂದು ಮುನಿಯಲ್ಲಿ ಬೇಡಿಕೊಂಡಾಗ ಆ ಶಾಪ ಪರಿಹಾರದ ಮಾರ್ಗವನ್ನು ದೂರ್ವಾಸರು ಸೂಚಿಸುತ್ತಾ ಆತ ನೀಡಿದ ಉಂಗುರನವನ್ನು ಕಂಡಾಗ ಆತನಿಗೆ ಶಕುಂತಲೆಯ ನೆನಪಾಗುತ್ತಾದೆ ಎಂದು ಪರಿಹಾರ ಸೂಚಿಸುತ್ತಾರೆ.

ಶಾಪದ ಪರಿಣಾಮವಾಗಿ ದುಷ್ಯಂತ ಆಕೆಯೊಂದಿಗೆ ಗಾಂಧರ್ವ ವಿವಾಹವಾಗಿರುವುದನ್ನು ಮರೆತು ಬಿಡುತ್ತಾನೆ.ಈ ನಡುವೆ ಶಚಿ ತೀರ್ಥದಲ್ಲಿ ಶಕುಂತಲೆಯ ಅರಿವಿಗೆ ಬಾರದಂತೆ ನೀರಿನಲ್ಲಿ ಬಿದ್ದು ಬಿಡುತ್ತದೆ.ಸಾಕುತಂದೆ ಕಣ್ವ ಮಹಾರ್ಷಿಗಳು ದುಷ್ಯಂತನ ಬಳಿ ಶಕುಂತಲೆಯನ್ನು ಬಿಟ್ಟು ಬರುವಂತೆ ಕಳುಹಿಸುತ್ತಾರೆ.ಆದರೆ ಅಲ್ಲಿ ದುಷ್ಯಂತ ಶಕುಂತಲೆಯನ್ನು ಗುರುತಿಸದೆ ತಿರಸ್ಕರಿಸುವುದು ನಡೆಯುತ್ತದೆ.ಅಲ್ಲಿರುವ ಗುರು ಕಾಶ್ಯಪರು ಶಕುಂಲೆಯನ್ನು ಸಾಕುತ್ತಾರೆ. ದಿನಕಳೆದಂತೆ ಶಚಿ ತೀರ್ಥದಲ್ಲಿದ್ದ ಉಂಗುರ ಮೀನಿನ ಮೂಲಕ ಬೆಸ್ತನೊಬ್ಬನಿಗೆ ಸೇರಿ ಆತ ಆ ಮುದ್ರೆಯುಂಗರವನ್ನು ದುಷ್ಯಂತ ರಾಜನಿಗೆ ಒಪ್ಪಿಸುತ್ತಾನೆ.

ಮುದ್ರೆಯುಮಗುರವನ್ನು ಕಂಡ ರಾಜ ದುಷ್ಯಂತನಿಗೆ ತನ್ನ ತಪ್ಪಿನ ಅರಿವಾಗುತ್ತದೆ.ಅದಕ್ಕಾಗಿ ಪರಿತಪಿಸುತ್ತಾನೆ.ದೇವೇಂದ್ರನ ನೆರವಿನೊಂದಿಗೆ ಕಾಶ್ಯಪರ ಆಶ್ರಮದಲ್ಲಿ ಮಗ ಭರತನೊಂದಿಗಿರುವ ಶಕುಂತಲೆಯನ್ನು ಕಾಣುತ್ತಾನೆ .ಕಾಶ್ಯಪರು ದುಷ್ಯಂತ ಶಕುಂತಲೆಯನ್ನು ಮರೆಯಲು ಕಾರಣವಾದ ದೂರ್ವಾಸ ಮುನಿಯ ಶಾಪದ ವಿಚಾರವನ್ನು ತಿಳಿಸುತ್ತಾರೆ.ದುಷ್ಯಂನ ಮರೆವಿಗೆ ಆತನ ತಪ್ಪಿಲ್ಲ ಎಂದು ಅರಿತ ಶಕುಂತಲೆ ಹಿಂದಿನ ಎಲ್ಲಾ ಘಟನೆಗಳನ್ನು ಮರೆತು ದುಷ್ಯಂತನನ್ನು ಪ್ರೀತಿಯಿಂದ ಕಾಣುವುದರೊಂದಿಗೆ ನಾಟಕ ಸುಖಾಂತ್ಯಗೊಳ್ಳುತ್ತದೆ. ಶಕುಂತಲೆಯ ಮುಗ್ಧ ಪ್ರೀತಿ,ಕಣ್ವರು ತಮ್ಮ ಸಾಕು ಮಗಳನ್ನು ಅಗಲುವಾಗ ಪಡುವ ನೋವು ಹೆಣ್ಣು ಹೆತ್ತವರ ನೋವಿನೊಂದಿಗೆ ಸಮೀಕರಿಸಲಾಗಿದೆ.

ಈ ನಡುವೆ ದುರಂತ ಮಯವಾಗಬಹುದಾಗಿದ್ದ ನಾಟಕವನ್ನು ನಾಟಕದ ಪಾತ್ರಗಳು ಕಾಶ್ಯಪ ಮುನಿಯ ಸಂಯಮದ ನಡೆ ನುಡಿಗಳ ಮೂಲಕ ಸುಖಾಂತ್ಯಗೊಳಿಸುತ್ತವೆ.ಭಾರತೀಯ ರಂಗ ಶಿಕ್ಷಣ ಕೇಂದ್ರದ ರಂಗಾಭ್ಯಾಸಿಗಳು ಮೂಲ ಸಂಸ್ಕೃತ ಈ ನಾಟಕವನ್ನು ಇನ್ನಷ್ಟು ಸರಳವಾಗಿ ನಟನೆಯ ಮೂಲಕ ಪ್ರೇಕ್ಷಕರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ. 

Writer - ಪುಷ್ಪರಾಜ್.ಬಿ.ಎನ್

contributor

Editor - ಪುಷ್ಪರಾಜ್.ಬಿ.ಎನ್

contributor

Similar News